Search This Blog

Wednesday, October 22, 2025

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ಮುಂದುವರೆದು, ಇತರೆ ಕ್ಷೇಮುಗಳ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರುಗಳನ್ನು ಅಂಗೀಕರಿಸುವ ಕುರಿತು, ಸಿಎಜಿ ರವರು ಸೂಚಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ಮೇಲಿನ ಸ್ವಯಂ ಮೌಲ್ಯಮಾಪನ ಹೇಳಿಕೆಯ ಅನುಸರಣಾ ಪಾಲನಾ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸಿರುವುದಾಗಿ, ಮಹಾಲೇಖಪಾಲರು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) DOD WODNY, 1) TA Bills 2) Work Expenditure 3) Bills Claims on GeM 4) Digitally signed e_Vouchers 5) GPF Advances ಕೈಂಗಳನ್ನು ಸೆಪ್ಟೆಂಬರ್ 2025 ರಿಂದ 3 ತಿಂಗಳುಗಳ ಕಾಲ, ಸಮಾನಾಂತರವಾಗಿ, ಭೌತಿಕ ಹಾಗೂ ಡಿಜಿಟಲ್ ರೂಪ ಎರಡೂ ವಿಧಾನಗಳನ್ನು ಪ್ರಯೋಗಿಸಬಹುದಾಗಿದೆ ಎಂದು ತಿಳಿಸಿರುತ್ತಾರೆಂದು, ಮೇಲೆ ಓದಲಾದ (3) ರ ಪತ್ರದಲ್ಲಿ ಖಜಾನೆ ಆಯುಕ್ತರು, ಪ್ರಯಾಣ ಭತ್ಯೆ ಬಿಲ್ಲು (TA BILLS) ಹಾಗೂ' ಭವಿಷ್ಯ ನಿಧಿ ಮುಂಗಡಗಳ (GPF ADVANCES) ಬಿಲ್ಲುಗಳನ್ನು ಡಿಜಿಟಲೈಸ್ ವೋಚರ್‌ಗಳಲ್ಲಿ ಪ್ಲೇಮುಗಳನ್ನು ಅಂಗೀಕರಿಸಲು ಸೂಕ್ತ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.

ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಪ್ರಯಾಣ ಭತ್ಯೆ ಬಿಲ್ಲು (TA BILLS) ಹಾಗೂ ಭವಿಷ್ಯ ನಿಧಿ ಮುಂಗಡಗಳ (GPF ADVANCES) ಬಿಲ್ಲುಗಳನ್ನು, ಡಿಡಿಓರವರು, ಖಜಾನೆ-2 ರಲ್ಲಿ ಆನ್‌ಲೈನ್ ನಲ್ಲಿ ಸೃಜಿಸಿ, ದಿನಾಂಕ: 01.11.2025 ರಿಂದ ಜಾರಿಗೆ ಬರುವಂತೆ 3 ತಿಂಗಳುಗಳ ಕಾಲ ಸಮಾನಾಂತರವಾಗಿ, ಭೌತಿಕ ಹಾಗೂ ಇ-ವಿಧಾನ (digital) ಎರಡೂ ವಿಧಾನಗಳಲ್ಲಿ ಖಜಾನೆಗೆ ಸಲ್ಲಿಸುವಂತೆ, ಮೂರು ತಿಂಗಳ ನಂತರ ಡಿಜಿಟಲ್ ರೂಪದಲ್ಲಿ ಮಾತ್ರ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಖಜಾನೆಗಳು ರಾಜ್ಯ ವಲಯದ ಪ್ರಯಾಣ ಭತ್ಯೆ ಹಾಗೂ ಭವಿಷ್ಯ ನಿಧಿ ಮುಂಗಡ ಡಿಜಿಟೈಸ್ಟ್ ವೋಚರ್‌ಗಳನ್ನು ಮಹಾಲೇಖಪಾಲರಿಗೆ ವೋಚರ್‌ಗಳಿಗಾಗಿಯೇ ಮೀಸಲಾದ ಸರ್ವರ್ (Dedicated Server) ರಲ್ಲಿ ಲಭ್ಯಗೊಳಿಸುವುದು. ಖಜಾನೆಗಳು, ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್) ಪ್ರಯಾಣ ಭತ್ಯೆ ಡಿಜಿಟೈಸ್‌ ವೋಚರ್‌ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಯಾಣಭತ್ಯೆ ಬಿಲ್ಲುಗಳಿಗೆ ಸಂಬಂಧಿಸಿದ ವೋಚರುಗಳನ್ನು ವೀಕ್ಷಿಸಲು, ಅವರ ಲಾಗಿನ್ ನಲ್ಲಿ e-Compllation Form 1 ಮೂಲಕ ಅವಕಾಶ ಕಲ್ಪಿಸುವುದು ಹಾಗೂ ಸದರಿ ಡಿಜಿಟೈಸ್ಟ್ ವೋಚರುಗಳನ್ನು ಲೆಕ್ಕಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡುವುದು. ಈ ಸಂಬಂಧ ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕರ್ನಾಟಕ ಖಜಾನೆ ಸಂಹಿತೆ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದಿದ್ದಾರೆ.

Credit Card: SBIನಿಂದ ಮಹತ್ವದ ನಿರ್ಧಾರ! ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಓದಲೇಬೇಕಾದ ಸುದ್ದಿ

ಶಿಕ್ಷಣ ಶುಲ್ಕ ಪಾವತಿ, ವಾಲೆಟ್ ಲೋಡ್ ಮತ್ತು ಕಾರ್ಡ್ ಬದಲಿ ಸೇರಿದಂತೆ ಕೆಲವು ವಹಿವಾಟುಗಳಿಗೆ ಈ ಹೊಸ ಶುಲ್ಕಗಳು ಅನ್ವಯವಾಗಲಿದೆ.

ಶಿಕ್ಷಣ ಶುಲ್ಕ ಪಾವತಿಗಳಿಗೆ: ಮೂರನೇ ವ್ಯಕ್ತಿಯ ಅಪ್ಲಿಕೇಶನ್‌, ಕಾರ್ಡ್ ಮೂಲಕ ಶಾಲಾ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ವ್ಯವಹಾರದ ಮೊತ್ತದ ಮೇಲೆ ಶೇ.1 ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಶಾಲಾ-ಕಾಲೇಜು ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ಪಿಒಎಸ್ (POS) ಯಂತ್ರದ ಮೂಲಕ ಪೇಮೆಂಟ್‌ ಮಾಡಿದರೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ ಎಂದು ಎಸ್‌ಬಿಐ ಕಾರ್ಡ್ ಸ್ಪಷ್ಟನೆ ನೀಡಿದೆ.

ವ್ಯಾಲೆಟ್ ಲೋಡ್ ಶುಲ್ಕಗಳು: ನಿಮ್ಮ ವ್ಯಾಲೆಟ್‌ಗೆ 1,000 ರೂ. ಗಿಂತ ಹೆಚ್ಚು ಲೋಡ್ ಮಾಡಿದರೆ, ಶೇ.1 ರಷ್ಟು ಶುಲ್ಕ ಅನ್ವಯವಾಗುತ್ತದೆ. ಈ ಶುಲ್ಕವು ಕೆಲವು ವ್ಯಾಪಾರಿ ಕೋಡ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಇತರೆ ಶುಲ್ಕಗಳು: ಎಸ್‌ಬಿಐ ಕಾರ್ಡ್ ತನ್ನ ಕೆಲವು ಹಳೆಯ ಶುಲ್ಕಗಳನ್ನು ಹಿಂದಿನಂತೆಯೇ ಮುಂದುವರೆಸಿದೆ. ಇವುಗಳಲ್ಲಿ ನಗದು ಪಾವತಿ, ಚೆಕ್ ಪಾವತಿ, ಕಾರ್ಡ್ ಬದಲಿ ಮತ್ತು ಲೇಟ್‌ ಪೇಮೆಂಟ್‌ ಫೀಸ್‌ಗಳು ಸಹ ಸೇರಿವೆ.

ನಗದು ಪಾವತಿ ಶುಲ್ಕ: ₹250

ನಗದು ಮುಂಗಡ ಶುಲ್ಕ: ವ್ಯವಹಾರದ ಶೇ.2.5% (ಕನಿಷ್ಠ ₹500)

ಕಾರ್ಡ್ ಬದಲಿ ಶುಲ್ಕ: ₹100 ರಿಂದ ₹250 (ಆರಮ್ ಕಾರ್ಡ್‌ಗಳಿಗೆ ₹1,500)

ಪಾವತಿ ತಿರಸ್ಕಾರ ಶುಲ್ಕ: ಪಾವತಿ ಮೊತ್ತದ ಶೇ.2% (ಕನಿಷ್ಠ ₹500)

ಚೆಕ್ ಪಾವತಿ ಶುಲ್ಕ: ₹200

ವಿದೇಶದಲ್ಲಿ ತುರ್ತು ಕಾರ್ಡ್ ಬದಲಿ: ವೀಸಾ ಕಾರ್ಡ್‌ಗಳಿಗೆ $175 ಮತ್ತು ಮಾಸ್ಟರ್‌ಕಾರ್ಡ್‌ಗಳಿಗೆ $148

ತಡವಾದ ಪಾವತಿ ಶುಲ್ಕಗಳು: ಕನಿಷ್ಠ ಪಾವತಿಸಬೇಕಾದ ಮೊತ್ತವನ್ನು (MAD) ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಎಸ್‌ಬಿಐ ಕಾರ್ಡ್ ಈ ಕೆಳಗಿನಂತೆ ತಡವಾದ ಶುಲ್ಕಗಳನ್ನು ವಿಧಿಸುತ್ತದೆ:

₹0 - ₹500: ಯಾವುದೇ ಶುಲ್ಕವಿಲ್ಲ

₹500 - ₹1,000: ₹400

₹1,000 - ₹10,000: ₹750

₹10,000 - ₹25,000: ₹950

₹25,000 - ₹50,000: ₹1,100

₹50,000 ಕ್ಕಿಂತ ಹೆಚ್ಚು: ₹1,300

ಎರಡು ಸತತ ಬಿಲ್ಲಿಂಗ್ ಸೈಕಲ್‌ಗಳಿಗೆ ಕನಿಷ್ಠ ಮೊತ್ತವನ್ನು (MAD) ಪಾವತಿಸದಿದ್ದರೆ, ಹೆಚ್ಚುವರಿ ₹100 ಲೇಟ್‌ ಪೇಮೆಂಟ್‌ ಫೀಸ್ ವಿಧಿಸಲಾಗುತ್ತದೆ. ಈ ಶುಲ್ಕ ಬದಲಾವಣೆಗಳಿಂದ ವ್ಯವಹಾರದಲ್ಲಿ ಯಾವುದೇ ದೋಷಗಳಾಗುವುದಿಲ್ಲ ಮತ್ತು ಯಾವ ವ್ಯವಹಾರಗಳಿಗೆ ಶುಲ್ಕ ಅನ್ವಯವಾಗುತ್ತದೆ ಎಂಬುದರ ಕುರಿತು ಕಾರ್ಡ್ ಬಳಕೆದಾರರಿಗೆ ಉತ್ತಮ ಮಾಹಿತಿ ನೀಡುತ್ತವೆ ಎಂದು ಎಸ್‌ಬಿಐ ಕಾರ್ಡ್‌ ತಿಳಿಸಿದೆ.

ಅಷ್ಟೇ ಅಲ್ಲದೇ, ಅನಗತ್ಯ ಶುಲ್ಕಗಳು ಅಥವಾ ಬಡ್ಡಿಯನ್ನು ತಪ್ಪಿಸಲು ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಎಚ್ಚರಿಕೆಯಿಂದ ಬಳಸಬೇಕು ಮತ್ತು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡುವುದು ಉತ್ತಮ. ಆದ್ದರಿಂದ ನವೆಂಬರ್ 1, 2025 ರಿಂದ, ಎಸ್‌ಬಿಐ ಕಾರ್ಡ್ ಬಳಕೆದಾರರು ಕೆಲವು ಪೇಮೆಂಟ್‌ಗಳ ಮೇಲೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಮುಂದಿನ ಪೇಮೆಂಟ್‌ನಲ್ಲಿ ನಿಮ್ಮ ಶುಲ್ಕದ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ.

world 🌎 Food 🥑🥝 Day 16September

ಮಾನವನ ಮೂಲಭೂ ಹಕ್ಕುಗಳಲ್ಲಿ ಒಂದು. ಇದಿಲ್ಲದೆ ಮನುಷ್ಯ ಮಾತ್ರವಲ್ಲ ಭೂಮಿಯ ಮೇಲಿನ ಯಾವ ಜೀವಿಯೂ ಬದುಕುವುದು ಕಷ್ಟ. ಅದಕ್ಕಾಗಿ ಆಹಾರವನ್ನು ವ್ಯರ್ಥ ಮಾಡಬಾರದು ಅನ್ನೋದು.  ಹೀಗಿದ್ರೂ ಅದೆಷ್ಟೋ ಜನರು ಊಟವನ್ನು ವ್ಯರ್ಥ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಪ್ರತಿನಿತ್ಯ 1 ಬಿಲಿಯನ್‌ಗೂ ಹೆಚ್ಚು ಊಟ ವ್ಯರ್ಥವಾಗುತ್ತಿದೆಯಂತೆ.

ಅದೇ ರೀತಿ ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಪ್ಪೊತ್ತಿನ ಊಟ ಸಿಗದೆ ಹಸಿವಿನಿಂದ ದಿನ ದೂಡುತ್ತಿದ್ದಾರೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಹಾರ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಆಹಾರದ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಅಕ್ಟೋಬರ್‌ 16 ರಂದು ವಿಶ್ವ ಆಹಾರ ದಿನವನ್ನು (World Food Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಆಹಾರ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?

1945 ರಲ್ಲಿ, ರೋಮ್‌ನಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ಸ್ಥಾಪನೆಯಾಯಿತು. ಇದು ಪ್ರಪಂಚದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಮೂಸಲಾಗಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸ್ಥಾಪನೆಯ ನೆನಪಿಗಾಗಿ 1981 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) 20 ನೇ ಸಾಮಾನ್ಯ ಸಮ್ಮೇಳನದಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನವು, ಆಹಾರವು ನಮ್ಮ ಹೊಟ್ಟೆಯನ್ನು ತುಂಬುವ ಸಾಧನವಲ್ಲ, ಬದಲಾಗಿ ಆರೋಗ್ಯಕರ ಜೀವನ ಮತ್ತು ಉತ್ತಮ ಭವಿಷ್ಯದ ಅಡಿಪಾಯವಾಗಿದೆ ಎಂಬುದನ್ನು ನೆನಪಿಸುತ್ತದೆ.

ವಿಶ್ವ ಆಹಾರ ದಿನವನ್ನು ಏಕೆ ಆಚರಿಸಲಾಗುತ್ತದೆ?

ಈ ದಿನವನ್ನು ಆಚರಿಸುವ ಉದ್ದೇಶ ಎಲ್ಲರಿಗೂ ಆಹಾರ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಹಸಿವನ್ನು ಸಂಪೂರ್ಣವಾಗಿ ತೊಡೆದುಹಾಕುವುದು.
ಈ ದಿನವನ್ನು ಆಚರಿಸಲು ಮತ್ತೊಂದು ದೊಡ್ಡ ಕಾರಣವೆಂದರೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಮತ್ತು ಆಹಾರ ವ್ಯರ್ಥ ಎಷ್ಟು ಹಾನಿಕಾರಕ ಎಂಬುದನ್ನು ಜನರಿಗೆ ಅರ್ಥ ಮಾಡಿಸುವುದಾಗಿದೆ.
ವಿಶ್ವ ಆಹಾರ ದಿನದ ಮಹತ್ವವೇನು?

ಈ ದಿನವು ಹಸಿವು ಮತ್ತು ಅಪೌಷ್ಟಿಕತೆಯ ಗಂಭೀರ ಜಾಗತಿಕ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತದೆ.
ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದರ ಬಗ್ಗೆ ಜನರಿಗೆ ಅರಿವನ್ನು ಮೂಡಿಸಲಾಗುತ್ತದೆ.
ಈ ದಿನದಂದು ಅಪೌಷ್ಠಿಕತೆ ಮತ್ತು ಸ್ಥೂಲಕಾಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಅನೇಕ ಜಾಗೃತಿ ಉಪಕ್ರಮಗಳನ್ನು ಸಹ ನಡೆಸಲಾಗುತ್ತದೆ.
ಮುಖ್ಯವಾಗಿ ಜಾಗತಿಕ ಹಸಿವಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರವು ಮಾನವನ ಮೂಲಭೂತ ಹಕ್ಕು ಎಂಬ ಸಂದೇಶವನ್ನು ಸಾರಲು ಈ ದಿನವನ್ನು ಆಚರಿಸಲಾಗುತ್ತದೆ.

Wednesday, October 15, 2025

ಸಂಪುಟ'ಕ್ಕಿಂತ ಸಚಿವ ದರ್ಜೆಯೇ ಭಾರ

ಮುಖ್ಯಮಂತ್ರಿಯವರ ಕಾನೂನು, ರಾಜಕೀಯ, ವೈದ್ಯಕೀಯ, ಆರ್ಥಿಕ, ಮಾಧ್ಯಮ ಸಲಹೆಗಾರರು ಸೇರಿದಂತೆ ನಿಗಮ ಮಂಡಳಿಗಳ ಅಧ್ಯಕ್ಷರು-ಉಪಾಧ್ಯಕ್ಷರು ಸೇರಿದಂತೆ ಒಟ್ಟು 76 ಮಂದಿಗೆ 'ಸಚಿವರ ಸ್ಥಾನಮಾನ'ದ 'ಗ್ಯಾರಂಟಿ'ಯನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ದಯಪಾಲಿಸಿದೆ.

2023ರಲ್ಲಿ ವಿಧಾನಸಭೆ-ವಿಧಾನ ಪರಿಷತ್‌ನ ಮುಖ್ಯ ಸಚೇತಕರಿಗೆ ಸಂಪುಟ ಸಚಿವ ದರ್ಜೆ ಸ್ಥಾನ ನೀಡುವ ಪ್ರಕ್ರಿಯೆ ಆರಂಭವಾಯಿತು. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್‌. ಪಾಟೀಲ ಅವರಿಗೆ 'ರಾಜ್ಯ ಸಚಿವರ ಸ್ಥಾನಮಾನ'ವನ್ನು ಇದೇ 14ರಂದು ಕಲ್ಪಿಸಲಾಗಿದೆ. ಅಲ್ಲಿಗೆ, ಸದ್ಯ 'ಸಚಿವ ಸ್ಥಾನಮಾನ' ದಕ್ಕಿಸಿಕೊಂಡವರ ಸಂಖ್ಯೆ 76ಕ್ಕೇರಿದೆ.

ಎಲ್ಲರನ್ನೂ ತೃಪ್ತಿಪಡಿಸಲು ಹಿಂದೆಲ್ಲ ಸಚಿವರ ಸಂಖ್ಯೆಯನ್ನು ಬೇಕಾಬಿಟ್ಟಿ ಏರಿಸುತ್ತಿದ್ದುದರಿಂದ 'ಜಂಬೋ' ಸಚಿವ ಸಂಪುಟದ ಭಾರ ಸರ್ಕಾರವನ್ನು ಬಾಧಿಸುತ್ತಿತ್ತು. ಶಾಸನಸಭೆಯ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 34 ಮಂದಿಗೆ ಅವಕಾಶ ಕಲ್ಪಿಸಬಹುದು ಎಂಬ ನಿಯಮ ತರಲಾಯಿತು. ಸಂಪುಟ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಅನ್ಯಮಾರ್ಗದಲ್ಲಿ ಅಧಿಕಾರ ನೀಡುವ ದಾರಿಯನ್ನು ಸರ್ಕಾರ ನಡೆಸುವವರು ಹಿಡಿದರು. ಇದು, ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರವಲ್ಲ; ಹಿಂದೆ ಆಡಳಿತ ನಡೆಸಿದ ಬಿಜೆಪಿ, ಜೆಡಿಎಸ್‌ ನೇತೃತ್ವದ ಸರ್ಕಾರಗಳಲ್ಲೂ ಈ ಪದ್ಧತಿ ಚಾಲ್ತಿಯಲ್ಲಿತ್ತು.

ಮುಖ್ಯಮಂತ್ರಿ, ಸಚಿವರು, ರಾಜ್ಯ ಸಚಿವರು, ವಿಧಾನಸಭೆ ಸ್ಪೀಕರ್‌, ವಿಧಾನ ಪರಿಷತ್‌ ಸಭಾಪತಿ, ಮುಖ್ಯ ಸಚೇತಕರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ವೇತನ ಏಪ್ರಿಲ್‌ನಿಂದ ದುಪ್ಪಟ್ಟಾಗಿದೆ. ವಿಧಾನಮಂಡಲದಲ್ಲಿ ‌ಚರ್ಚೆ ಇಲ್ಲದೆಯೇ ಈ ಮಸೂದೆಗಳು ಅಂಗೀಕಾರವಾಗಿ, ಜಾರಿಯಾಗಿವೆ.

ರಾಜ್ಯ ಸಚಿವ ಸ್ಥಾನಮಾನ ಪಡೆದವರಿಗೆ ಸಂಪುಟ ಸಚಿವ ಸ್ಥಾನಮಾನಕ್ಕಿಂತ ವೇತನ, ಮನೆ ಬಾಡಿಗೆ, ಇಂಧನ, ವಾರ್ಷಿಕ ಅತಿಥಿ ಭತ್ಯೆಯಲ್ಲಿ ಅಲ್ಪ ಕಡಿಮೆ ಇರುವುದು ಬಿಟ್ಟರೆ, ಉಳಿದ ಸೌಲಭ್ಯಗಳಲ್ಲಿ ವ್ಯತ್ಯಾಸವಿಲ್ಲ.

ವೇತನ, ಮನೆ ಬಾಡಿಗೆಗೆ ಲಕ್ಷಾಂತರ ರೂಪಾಯಿ ತಿಂಗಳಿಗೆ ವೆಚ್ಚಾಗುವ ಜೊತೆಗೆ, 12 ಸಿಬ್ಬಂದಿಯನ್ನೂ 'ಸಚಿವ ಸ್ಥಾನಮಾನ' ಹೊಂದಿರುವವರು ಪಡೆಯುತ್ತಾರೆ. ಸರಾಸರಿ ₹30 ಸಾವಿರ ವೇತನವಾದರೆ, ಈ ಬಾಬ್ತಿನಲ್ಲೇ ₹3.6 ಲಕ್ಷ ವೆಚ್ಚವಾಗುತ್ತದೆ.

ಬಿಜೆಪಿ ಅವಧಿಯಲ್ಲಿ 72

ನಿಗಮ-ಮಂಡಳಿ, ಸಲಹೆಗಾರರಿಗೆ 'ಸಚಿವ ಸ್ಥಾನಮಾನ' ನೀಡುವ ಪ್ರಕ್ರಿಯೆ ಬಿಜೆಪಿ ಸರ್ಕಾರದಲ್ಲೂ ಇತ್ತು. ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ, 72 ಮಂದಿಗೆ 'ಸಚಿವ ಸ್ಥಾನಮಾನ' ನೀಡಲಾಗಿತ್ತು. ಈಗ, ಕಾಂಗ್ರೆಸ್‌ ಸರ್ಕಾರದಲ್ಲಿ ಆ ಸಂಖ್ಯೆ(76) ಮೀರಿ ದಾಖಲೆ ನಿರ್ಮಾಣವಾಗಿದೆ.

ಉಲ್ಲಂಘನೆ: 'ಸಂವಿಧಾನದ ವಿಧಿ 164(1ಎ) ಅನ್ನು ಉಲ್ಲಂಘಿಸಿ, ಬೇಕಾದವರಿಗೆಲ್ಲ ಸಚಿವ ಸ್ಥಾನಮಾನವನ್ನು ನೀಡಲಾಗಿದೆ. ಸಂವಿಧಾನ ಹಾಗೂ ಕಾನೂನುಗಳ ಉಲ್ಲಂಘನೆ ಮಾಡಿ, ಸರ್ಕಾರಕ್ಕೆ ಅತಿಹೆಚ್ಚು ಆರ್ಥಿಕ ಹೊರೆಯನ್ನೂ ಸೃಷ್ಟಿಸಲಾಗಿದೆ. ಇದನ್ನು ಪ್ರಶ್ನಿಸಿ, ಈ ಸ್ಥಾನಮಾನವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸ
ಲಾಗಿದೆ' ಎಂದು ಅರ್ಜಿದಾರ ಸೂರಿ ಪಾಯಲ್‌ 'ಪ್ರಜಾವಾಣಿ'ಗೆ ತಿಳಿಸಿದರು.

📰 ನ್ಯೂಸ್ ಮತ್ತು ವಿಶೇಷ

Tuesday, October 14, 2025

kea

ಈ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ (HK) ವೃಂದದಡಿ ನೇರ ನೇಮಕಾತಿ ಮೂಲಕ ಮಾಡಲಾಗುತ್ತಿದೆ.

ಐದು ಸಂಸ್ಥೆಗಳಲ್ಲಿ ನೇಮಕಾತಿ:

ಒಟ್ಟು ಐದು ಸರ್ಕಾರಿ ಸಂಸ್ಥೆಗಳು/ನಿಗಮ/ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅವುಗಳೆಂದರೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ಸ್‌ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.

ಹುದ್ದೆಗಳ ವಿವರ ಮತ್ತು ಅರ್ಹತೆಗಳು:

ಕೆಕೆಆರ್‌ಟಿಸಿ (KKRTC) 253 ಹುದ್ದೆಗಳು: ಇದರಲ್ಲಿ 240 ನಿರ್ವಾಹಕ (Conductor) ಹುದ್ದೆಗಳು ಮತ್ತು 13 ಸಹಾಯಕ ಲೆಕ್ಕಿಗ ಹುದ್ದೆಗಳು ಸೇರಿವೆ. ನಿರ್ವಾಹಕ ಹುದ್ದೆಗೆ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಮಾನ್ಯತೆ ಪಡೆದ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಕಡ್ಡಾಯವಾಗಿರುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA): ಪ್ರಥಮ ದರ್ಜೆ ಸಹಾಯಕರು (FDA) (ಪದವಿ) 1 ಹುದ್ದೆ ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) (ಪಿಯುಸಿ ಅಥವಾ ತತ್ಸಮಾನ) 6 ಹುದ್ದೆಗಳು.

ತಾಂತ್ರಿಕ ಶಿಕ್ಷಣ ಇಲಾಖೆ: ಪ್ರಥಮ ದರ್ಜೆ ಸಹಾಯಕರು (FDA) 16 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) 23 ಹುದ್ದೆಗಳು ಲಭ್ಯವಿವೆ.

ಇತರೆ ಹುದ್ದೆಗಳು: ಕೆಎಸ್‌ಡಿಎಲ್‌ನಲ್ಲಿ 14 ಹುದ್ದೆಗಳು (ಮಾರುಕಟ್ಟೆ ಕಿರಿಯ ಅಧಿಕಾರಿ-1, ಮಾರಾಟ ಪ್ರತಿನಿಧಿ-04, ಆಪರೇಟರ್-09) ಲಭ್ಯವಿದೆ. ಇನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯ (ಆರ್‌ಜಿಎಚ್‌ಎಸ್‌ಯು)ನಲ್ಲಿ 4 ಹುದ್ದೆಗಳು (ಜೂನಿಯರ್ ಪ್ರೋಗ್ರಾಮರ್-1, ಸಹಾಯಕ-1, ಕಿರಿಯ ಸಹಾಯಕ-2) ಲಭ್ಯವಿದೆ.

ಪ್ರಮುಖ ದಿನಾಂಕಗಳು ಮತ್ತು ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 9, 2025 ರಂದು ಪ್ರಾರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10, 2025 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಗೆ ನವೆಂಬರ್ 11, 2025 ಅಂತಿಮ ದಿನವಾಗಿದೆ.

ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500/- ಶುಲ್ಕ ನಿಗದಿಪಡಿಸಲಾಗಿದೆ. ವಿಶೇಷ ಚೇತನರಿಗೆ 250 ರೂ. ನಿಗದಿಪಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ, ಪ್ರತಿ ಹೆಚ್ಚುವರಿ ಹುದ್ದೆಗೆ ₹100/- ಅರ್ಜಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಬೇಕು.

ವಯೋಮಿತಿ ಮತ್ತು ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಗಳಿಗೆ 41 ವರ್ಷಗಳಾಗಿವೆ. ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳವರೆಗೆ ಇರುತ್ತದೆ.

ಆಯ್ಕೆಯು ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯುತ್ತದೆ. ಅರ್ಹತೆಗಾಗಿ ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 35 ರಷ್ಟು (ಕೆಕೆಆರ್‌ಟಿಸಿ ಹುದ್ದೆಗಳಿಗೆ ಶೇಕಡಾ 30) ಅಂಕಗಳನ್ನು ಗಳಿಸುವುದು ಕಡ್ಡಾಯ. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ (1/4) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್ (https://cetonline.karnataka.gov.in/VAOResult/DigilockerReg.aspx) ಗೆ ಭೇಟಿ ನೀಡಬಹುದಾಗಿದೆ.

Thursday, October 9, 2025

`ವಿಶ್ವ ಅಂಚೆ ದಿನ' : ಇತಿಹಾಸ, ಥೀಮ್, ಮಹತ್ವ ತಿಳಿಯಿರಿ | Word Post Day 2025

ವಿಶ್ವ ಅಂಚೆ ದಿನ 2025- ದೇಶಗಳು ಮತ್ತು ಖಂಡಗಳಾದ್ಯಂತ ಜನರನ್ನು ಸಂಪರ್ಕಿಸುವಲ್ಲಿ ಅಂಚೆ ಸೇವೆಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಗೌರವಿಸುವ ಸಲುವಾಗಿ ಇಂದು ಜಗತ್ತು ವಿಶ್ವ ಅಂಚೆ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಅಕ್ಟೋಬರ್ 9 ರಂದು ಆಚರಿಸಲಾಗುವ ಈ ದಿನವು 1874 ರಲ್ಲಿ ಸ್ವಿಸ್ ರಾಜಧಾನಿ ಬರ್ನ್ನಲ್ಲಿ ಸಾರ್ವತ್ರಿಕ ಅಂಚೆ ಒಕ್ಕೂಟ (ಯುಪಿಯು) ಸ್ಥಾಪನೆಯ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

1969 ರಲ್ಲಿ ಜಪಾನ್ನ ಟೋಕಿಯೊದಲ್ಲಿ ನಡೆದ ಸಾರ್ವತ್ರಿಕ ಅಂಚೆ ಒಕ್ಕೂಟದ ಕಾಂಗ್ರೆಸ್ ವಿಶ್ವ ಅಂಚೆ ದಿನವನ್ನು ಘೋಷಿಸಿತು. ಈ ವಿಶೇಷ ದಿನವು ಪ್ರಪಂಚದಾದ್ಯಂತ ಶತಕೋಟಿ ಜನರಿಗೆ ವಿಶ್ವಾಸಾರ್ಹ ಜೀವನಾಡಿಯಾಗಿ ಉಳಿದಿರುವ ಅಂಚೆ ವ್ಯವಸ್ಥೆಗಳು ಮತ್ತು ಸೇವೆಗಳ ವಿಕಸನವನ್ನು ಎತ್ತಿ ತೋರಿಸುತ್ತದೆ.

ವಿಶ್ವ ಅಂಚೆ ದಿನ 2025- ದಿನದ ಮಹತ್ವ

1969 ರಲ್ಲಿ ಪ್ರಾರಂಭವಾದಾಗಿನಿಂದ, ಪ್ರಪಂಚದಾದ್ಯಂತದ ದೇಶಗಳು ವಾರ್ಷಿಕವಾಗಿ ವಿಶ್ವ ಅಂಚೆ ದಿನ ಆಚರಣೆಯಲ್ಲಿ ಭಾಗವಹಿಸುತ್ತವೆ. ವಿಶ್ವಸಂಸ್ಥೆಯ ಪ್ರಕಾರ, ಅನೇಕ ದೇಶಗಳಲ್ಲಿನ ಅಂಚೆ ಸಂಸ್ಥೆಗಳು ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲು ಅಥವಾ ಉತ್ತೇಜಿಸಲು ಈ ಕಾರ್ಯಕ್ರಮವನ್ನು ಬಳಸುತ್ತವೆ. ಈ ದಿನವನ್ನು ಆಚರಿಸುವ ಉದ್ದೇಶವೆಂದರೆ ಜನರು ಮತ್ತು ವ್ಯವಹಾರಗಳ ದೈನಂದಿನ ಜೀವನದಲ್ಲಿ ಅಂಚೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜಾಗತಿಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯನ್ನು ಗುರುತಿಸುವುದು.

ಯುಪಿಯು ಸದಸ್ಯ ರಾಷ್ಟ್ರಗಳು ಈ ದಿನವನ್ನು ಆಚರಿಸಲು ತಮ್ಮದೇ ಆದ ರಾಷ್ಟ್ರೀಯ ಚಟುವಟಿಕೆಗಳನ್ನು ಆಯೋಜಿಸಲು ವಿಶೇಷವಾಗಿ ಪ್ರೋತ್ಸಾಹಿಸಲಾಗುತ್ತದೆ. ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಅಥವಾ ಪ್ರಚಾರದಿಂದ ಹಿಡಿದು ಅಂಚೆ ಕಚೇರಿಗಳು, ಅಂಚೆ ಕೇಂದ್ರಗಳು ಮತ್ತು ಅಂಚೆ ವಸ್ತು ಸಂಗ್ರಹಾಲಯಗಳಲ್ಲಿ ಮುಕ್ತ ದಿನಗಳ ಸಂಘಟನೆಯವರೆಗೆ ಎಲ್ಲವೂ ಇದರಲ್ಲಿ ಸೇರಿದೆ. 192 ಸದಸ್ಯ ರಾಷ್ಟ್ರಗಳೊಂದಿಗೆ, ಯುಪಿಯು ವಿಶ್ವದಾದ್ಯಂತ ಎರಡನೇ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.

ವಿಶ್ವ ಅಂಚೆ ದಿನ 2025- ಥೀಮ್

ವಿಶ್ವ ಅಂಚೆ ದಿನವನ್ನು ಆಚರಿಸಲು, ಯುಪಿಯು ಪ್ರತಿ ವರ್ಷ ವಿಶೇಷ ಥೀಮ್ ಅನ್ನು ಪ್ರಕಟಿಸುತ್ತದೆ. ಈ ವರ್ಷದ ಥೀಮ್ #PostForPeople: ಸ್ಥಳೀಯ ಸೇವೆ. ಜಾಗತಿಕ ತಲುಪುವಿಕೆ. 2025 ರ ಥೀಮ್ ಅಡಿಯಲ್ಲಿ, ಈ ವರ್ಷದ ಅಭಿಯಾನವು ಪೋಸ್ಟ್ ಅನ್ನು ಸಮುದಾಯಗಳಲ್ಲಿ ಬೇರೂರಿರುವ ಮತ್ತು ಜನರಿಂದ ನಡೆಸಲ್ಪಡುವ ಪ್ರಮುಖ ಸಾರ್ವಜನಿಕ ಸೇವೆಯಾಗಿ ಎತ್ತಿ ತೋರಿಸುತ್ತದೆ. ಯುಪಿಯು "ಗ್ರಾಮೀಣ ಹಳ್ಳಿಗಳಿಂದ ನಗರ ಕೇಂದ್ರಗಳವರೆಗೆ, ನಾವು ಜನರಿಗಾಗಿ ಅಂಚೆಯನ್ನು ಗೌರವಿಸುತ್ತೇವೆ" ಎಂದು ಥೀಮ್ ಘೋಷಿಸಿದೆ.

ವಿಶ್ವ ಅಂಚೆ ದಿನ 2025 - ಭಾರತದ ಪ್ರಯಾಣದ ಒಂದು ನೋಟ

ಭಾರತದ ಅಂಚೆ ವ್ಯವಸ್ಥೆಯು ಅನೌಪಚಾರಿಕ ಸಂವಹನ ವಿಧಾನಗಳಾದ ಓಟಗಾರರು, ಕುದುರೆ ಸವಾರಿ ಮಾಡುವ ಸಂದೇಶವಾಹಕರು ಮತ್ತು ವಾಹಕ ಪಾರಿವಾಳಗಳಿಂದ ಸುಸಂಘಟಿತ ಮತ್ತು ರಚನಾತ್ಮಕ ಅಂಚೆ ಜಾಲವಾಗಿ ವಿಕಸನಗೊಂಡ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಇಂಡಿಯಾ ಪೋಸ್ಟ್ನ ಔಪಚಾರಿಕ ಸ್ಥಾಪನೆಯು ರೂಪುಗೊಂಡಿತು. 1854 ರಲ್ಲಿ, "ಸಿಂಡೆ ಡಾಕ್" ಎಂದು ಕರೆಯಲ್ಪಡುವ ಮೊದಲ ಅಂಚೆ ಚೀಟಿಯನ್ನು ಸಿಂಧ್ ಪ್ರದೇಶದಲ್ಲಿ (ಇಂದಿನ ಪಾಕಿಸ್ತಾನ) ಬಿಡುಗಡೆ ಮಾಡಲಾಯಿತು, ಇದು ಭಾರತದಲ್ಲಿ ಔಪಚಾರಿಕ ಅಂಚೆ ಸೇವೆಗಳ ಆರಂಭವನ್ನು ಗುರುತಿಸಿತು.

1947 ರಲ್ಲಿ ಸ್ವಾತಂತ್ರ್ಯದ ನಂತರ, ಇಂಡಿಯಾ ಪೋಸ್ಟ್ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ಆಧುನೀಕರಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಸುಧಾರಣೆಗಳನ್ನು ಕಂಡಿತು ಮತ್ತು ಇಂದು ಅದು ಹಲವಾರು ಸೇವೆಗಳನ್ನು ಒದಗಿಸುತ್ತದೆ. ಡಿಜಿಟಲ್ ಯುಗದಲ್ಲಿ ಸವಾಲುಗಳನ್ನು ಎದುರಿಸಲು, ಇಂಡಿಯಾ ಪೋಸ್ಟ್ ಇ-ಪೋಸ್ಟ್ ಮತ್ತು ಇ-ಕಾಮರ್ಸ್ ಪರಿಹಾರಗಳಂತಹ ಸೇವೆಗಳನ್ನು ಪರಿಚಯಿಸುವ ಮೂಲಕ ಡಿಜಿಟಲ್ ರೂಪಾಂತರವನ್ನು ಸ್ವೀಕರಿಸಿದೆ, ಇದು ಇಂದಿಗೂ ಪೋಸ್ಟ್ ಸೇವೆಗಳನ್ನು ಪ್ರಸ್ತುತವಾಗಿಸಿದೆ.

Tuesday, October 7, 2025

ನೊಬೆಲ್ ಪುರಸ್ಕೃತ ಭಾರತೀಯರು

ನೊಬೆಲ್ ಪ್ರಶಸ್ತಿಯು ಜಗತ್ತಿನ ಅತ್ಯುನ್ನತ ಮತ್ತು ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಯ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ:

​ನೊಬೆಲ್ ಪ್ರಶಸ್ತಿಯ ಪರಿಚಯ

  • ಸ್ಥಾಪಕರು: ಈ ಪ್ರಶಸ್ತಿಯನ್ನು ಸ್ವೀಡಿಷ್‌ನ ವಿಜ್ಞಾನಿ, ಇಂಜಿನಿಯರ್ ಮತ್ತು ಡೈನಮೈಟ್‌ನ ಸಂಶೋಧಕ ಆಲ್ಫ್ರೆಡ್ ನೊಬೆಲ್ (Alfred Nobel) ಅವರ ನೆನಪಿನಲ್ಲಿ ಸ್ಥಾಪಿಸಲಾಗಿದೆ.
  • ಇತಿಹಾಸ: ಆಲ್ಫ್ರೆಡ್ ನೊಬೆಲ್ ಅವರು 1895 ರಲ್ಲಿ ಬರೆದ ತಮ್ಮ ಉಯಿಲಿನ (Will) ಮೂಲಕ ತಮ್ಮ ಅಪಾರ ಸಂಪತ್ತಿನ ಬಹುಪಾಲನ್ನು ಮಾನವ ಕುಲಕ್ಕೆ ಮಹತ್ತರ ಕೊಡುಗೆ ನೀಡಿದವರಿಗೆ ವಾರ್ಷಿಕ ಬಹುಮಾನ ನೀಡಲು ಬಳಸಬೇಕು ಎಂದು ತಿಳಿಸಿದ್ದರು. ಇದರನ್ವಯ 1901 ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಯಿತು.
  • ಗುರಿ: ಈ ಪ್ರಶಸ್ತಿಯನ್ನು ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಮಾನವಕುಲದ ಪ್ರಗತಿಗಾಗಿ, ಸಂಶೋಧನೆ, ಅವಿಷ್ಕಾರ, ಅತ್ಯುತ್ತಮ ಸಾಹಿತ್ಯಿಕ ಕೊಡುಗೆ ಮತ್ತು ಶಾಂತಿಯ ಸ್ಥಾಪನೆಗಾಗಿ ಮಾಡಿದ ಅತ್ಯುಚ್ಚ ಸೇವೆಗಳನ್ನು ಗುರುತಿಸಿ ನೀಡಲಾಗುತ್ತದೆ.
  • ಪ್ರಶಸ್ತಿ ವಿತರಣೆ: ಪ್ರತಿ ವರ್ಷವೂ ಪ್ರಶಸ್ತಿ ವಿಜೇತರ ಹೆಸರನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗುತ್ತದೆ ಮತ್ತು ಪ್ರಶಸ್ತಿಗಳನ್ನು ಡಿಸೆಂಬರ್ 10 ರಂದು (ಆಲ್ಫ್ರೆಡ್ ನೊಬೆಲ್ ನಿಧನರಾದ ದಿನ) ವಿತರಿಸಲಾಗುತ್ತದೆ.

​ಪ್ರಶಸ್ತಿ ವಿಭಾಗಗಳು

​ನೊಬೆಲ್ ಪ್ರಶಸ್ತಿಯನ್ನು ಒಟ್ಟು ಆರು ವಿಭಾಗಗಳಲ್ಲಿ ನೀಡಲಾಗುತ್ತದೆ. ಇವುಗಳಲ್ಲಿ ಮೊದಲ ಐದು ವಿಭಾಗಗಳನ್ನು ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿ ನಮೂದಿಸಲಾಗಿತ್ತು.

  1. ಭೌತಶಾಸ್ತ್ರ (Physics): ಭೌತಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಆವಿಷ್ಕಾರ ಮತ್ತು ಸಂಶೋಧನೆಗಾಗಿ.
  2. ರಸಾಯನಶಾಸ್ತ್ರ (Chemistry): ರಸಾಯನಶಾಸ್ತ್ರದಲ್ಲಿನ ಅದ್ಭುತ ಆವಿಷ್ಕಾರಗಳು ಮತ್ತು ಕೊಡುಗೆಗಳಿಗಾಗಿ.
  3. ಶರೀರ ವಿಜ್ಞಾನ ಅಥವಾ ವೈದ್ಯಕೀಯ (Physiology or Medicine): ವೈದ್ಯಕೀಯ ಮತ್ತು ಜೈವಿಕ ವಿಜ್ಞಾನಗಳಲ್ಲಿನ ಪ್ರಮುಖ ಪ್ರಗತಿಗಾಗಿ.
  4. ಸಾಹಿತ್ಯ (Literature): ಅತ್ಯುತ್ತಮ ಸಾಹಿತ್ಯಿಕ ಕೊಡುಗೆಗಾಗಿ.
  5. ಶಾಂತಿ (Peace): ರಾಷ್ಟ್ರಗಳ ನಡುವಿನ ಭ್ರಾತೃತ್ವ, ಶಾಂತಿ ಸ್ಥಾಪನೆ ಮತ್ತು ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಾಡಿದ ಅತ್ಯುತ್ತಮ ಕಾರ್ಯಕ್ಕಾಗಿ (ಇದನ್ನು ನಾರ್ವೆಯ ಓಸ್ಲೋನಲ್ಲಿ ನೀಡಲಾಗುತ್ತದೆ, ಉಳಿದ ಪ್ರಶಸ್ತಿಗಳನ್ನು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನೀಡಲಾಗುತ್ತದೆ).
  6. ಅರ್ಥಶಾಸ್ತ್ರ (Economic Sciences): ಇದು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ 1968 ರಲ್ಲಿ ಸ್ವೀಡನ್‌ನ ಕೇಂದ್ರ ಬ್ಯಾಂಕ್ (Sveriges Riksbank) ಸ್ಥಾಪಿಸಿದ ಪ್ರಶಸ್ತಿಯಾಗಿದೆ ಮತ್ತು 1969 ರಿಂದ ಇದನ್ನು ನೀಡಲಾಗುತ್ತಿದೆ (ಇದನ್ನು ನೊಬೆಲ್ ಪ್ರಶಸ್ತಿಯೊಂದಿಗೆ ಸೇರಿಸಲಾಗುತ್ತದೆ, ಆದರೆ ಮೂಲ ನೊಬೆಲ್ ಪ್ರಶಸ್ತಿಗಳಲ್ಲಿ ಇದು ಇರಲಿಲ್ಲ).

​ಪ್ರಶಸ್ತಿ ವಿಜೇತರಿಗೆ ಸಿಗುವ ಸನ್ಮಾನ

​ಪ್ರತಿ ನೊಬೆಲ್ ಪುರಸ್ಕೃತರು (Laureate) ಈ ಕೆಳಗಿನ ಸನ್ಮಾನಗಳನ್ನು ಪಡೆಯುತ್ತಾರೆ:

  • ಚಿನ್ನದ ಪದಕ (Gold Medal): ಆಲ್ಫ್ರೆಡ್ ನೊಬೆಲ್ ಅವರ ಭಾವಚಿತ್ರವಿರುವ ಚಿನ್ನದ ಪದಕ.
  • ಡಿಪ್ಲೋಮಾ (Diploma): ಪ್ರಶಸ್ತಿಯ ಉಲ್ಲೇಖವಿರುವ ಅಧಿಕೃತ ಡಿಪ್ಲೋಮಾ.
  • ನಗದು ಬಹುಮಾನ (Monetary Award): ನೊಬೆಲ್ ಫೌಂಡೇಶನ್‌ನ ಆದಾಯದ ಆಧಾರದ ಮೇಲೆ ಪ್ರತಿ ವರ್ಷ ಬದಲಾಗುವ ಗಣನೀಯ ಮೊತ್ತದ ನಗದು ಬಹುಮಾನ.

​ಪ್ರತಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗರಿಷ್ಠ ಮೂರು ವ್ಯಕ್ತಿಗಳ ನಡುವೆ ಹಂಚಬಹುದು. ಶಾಂತಿ ಪ್ರಶಸ್ತಿಯನ್ನು ಮಾತ್ರ ವ್ಯಕ್ತಿಗಳ ಜೊತೆಗೆ ಸಂಸ್ಥೆಗಳಿಗೂ ನೀಡಬಹುದಾಗಿದೆ.

​ನೊಬೆಲ್ ಪುರಸ್ಕೃತ ಭಾರತೀಯರು

​ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪ್ರಜೆ ರವೀಂದ್ರನಾಥ ಟ್ಯಾಗೋರ್. ಅವರಿಗೆ 1913 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಯಿತು. ಮದರ್ ತೆರೇಸಾ ಅವರು ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ.

​ನೊಬೆಲ್ ಪ್ರಶಸ್ತಿಯ ಬಗ್ಗೆ ನಿಮಗೆ ಇನ್ನಾವುದೇ ನಿರ್ದಿಷ್ಟ ವಿಭಾಗದ ಮಾಹಿತಿ ಬೇಕಿದ್ದರೆ, ದಯವಿಟ್ಟು ಕೇಳಿ.

ಕ್ರ.ಸಂ.

ಹೆಸರು

ವರ್ಷ

ಕ್ಷೇತ್ರ

ಪ್ರಮುಖ ಕೊಡುಗೆ

1.

ರವೀಂದ್ರನಾಥ ಟ್ಯಾಗೋರ್

1913

ಸಾಹಿತ್ಯ

ತಮ್ಮ ಕವನ ಸಂಕಲನವಾದ 'ಗೀತಾಂಜಲಿ' ಗಾಗಿ. ಇವರು ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮತ್ತು ಏಷ್ಯಾದ ವ್ಯಕ್ತಿ.

2.

ಸರ್ ಸಿ. ವಿ. ರಾಮನ್

1930

ಭೌತಶಾಸ್ತ್ರ

'ರಾಮನ್ ಪರಿಣಾಮ' (ಬೆಳಕಿನ ಚದುರುವಿಕೆಯ ಕುರಿತ ಸಂಶೋಧನೆ) ಆವಿಷ್ಕಾರಕ್ಕಾಗಿ.

3.

ಹರ್ ಗೋಬಿಂದ್ ಖುರಾನಾ

1968

ಶರೀರ ವಿಜ್ಞಾನ/ವೈದ್ಯಕೀಯ

ಅನುವಂಶಿಕ ಕೋಡ್ (Genetic Code) ಮತ್ತು ಪ್ರೋಟೀನ್ ಸಂಶ್ಲೇಷಣೆಯಲ್ಲಿ ಅದರ ಕಾರ್ಯದ ಕುರಿತ ವ್ಯಾಖ್ಯಾನಕ್ಕಾಗಿ (ಇವರು ಭಾರತದಲ್ಲಿ ಜನಿಸಿ, ನಂತರ ಅಮೆರಿಕದ ಪೌರತ್ವ ಪಡೆದವರು).

4.

ಮದರ್ ತೆರೇಸಾ

1979

ಶಾಂತಿ

ದುಃಖಿತ ಮಾನವಕುಲಕ್ಕೆ ಸಹಾಯ ಮಾಡಲು ನೀಡಿದ ಕೊಡುಗೆಯನ್ನು ಗುರುತಿಸಿ. (ಇವರು ಅಲ್ಬೇನಿಯಾ ಮೂಲದವರಾಗಿದ್ದು, ಭಾರತದ ಪೌರತ್ವ ಪಡೆದಿದ್ದರು).

5.

ಸುಬ್ರಹ್ಮಣ್ಯನ್ ಚಂದ್ರಶೇಖರ್

1983

ಭೌತಶಾಸ್ತ್ರ

ನಕ್ಷತ್ರಗಳ ರಚನೆ ಮತ್ತು ವಿಕಾಸಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಅಧ್ಯಯನಗಳಿಗಾಗಿ (ಚಂದ್ರಶೇಖರ್ ಮಿತಿ). (ಇವರು ಭಾರತದಲ್ಲಿ ಜನಿಸಿ, ನಂತರ ಅಮೆರಿಕದ ಪೌರತ್ವ ಪಡೆದವರು).

6.

ಅಮರ್ತ್ಯ ಸೇನ್

1998

ಅರ್ಥಶಾಸ್ತ್ರ

ಕಲ್ಯಾಣ ಅರ್ಥಶಾಸ್ತ್ರಕ್ಕೆ (Welfare Economics) ನೀಡಿದ ಕೊಡುಗೆಗಳಿಗಾಗಿ.

7.

ವೆಂಕಟರಾಮನ್ ರಾಮಕೃಷ್ಣನ್

2009

ರಸಾಯನಶಾಸ್ತ್ರ

ರೈಬೋಸೋಮ್‌ನ ರಚನೆ ಮತ್ತು ಕಾರ್ಯದ ಅಧ್ಯಯನಗಳಿಗಾಗಿ. (ಇವರು ಭಾರತದಲ್ಲಿ ಜನಿಸಿ, ನಂತರ ಯುಕೆ/ಅಮೆರಿಕದ ಪೌರತ್ವ ಪಡೆದವರು).

8.

ಕೈಲಾಶ್ ಸತ್ಯಾರ್ಥಿ

2014

ಶಾಂತಿ

ಮಕ್ಕಳು ಮತ್ತು ಯುವಜನರ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಅವರ ಹೋರಾಟಕ್ಕಾಗಿ.

9.

ಅಭಿಜಿತ್ ಬ್ಯಾನರ್ಜಿ

2019

ಅರ್ಥಶಾಸ್ತ್ರ

ಜಾಗತಿಕ ಬಡತನವನ್ನು ನಿವಾರಿಸಲು ಅವರ ಪ್ರಾಯೋಗಿಕ ವಿಧಾನಕ್ಕಾಗಿ. (ಇವರು ಭಾರತದಲ್ಲಿ ಜನಿಸಿ, ನಂತರ ಅಮೆರಿಕದ ಪೌರತ್ವ ಪಡೆದವರು).