Search This Blog

Friday, January 24, 2025

ಸಾಮಾನ್ಯ ಜ್ಞಾನ

 ಪ್ರಶ್ನೆ 1: ವಿಶ್ವ ಪ್ರಸಿದ್ಧ ಬಾಕ್ಸಿಂಗ್ ಪಟು ಮುಹಮ್ಮದ್ ಅಲಿಯವರ ಮೂಲ ಹೆಸರು ಏನು?


ಉತ್ತರ: ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ ಜೂನಿಯರ್ (Cassius Marcellus Clay Jr)


ಪ್ರಶ್ನೆ 2: ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ..?


ಉತ್ತರ: ಮೇ 3


ಪ್ರಶ್ನೆ 3: ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸಲಾಗುತ್ತದೆ?


ಉತ್ತರ: ವಿಶ್ವ ಅಹಿಂಸಾ ದಿನ


ಪ್ರಶ್ನೆ 4: ನೆಟ್‌ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ


ಉತ್ತರ: 7 ಜನ


ಪ್ರಶ್ನೆ 5: ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?


ಉತ್ತರ: ಕುದುರೆ ಸ್ಪರ್ಧೆ (Horse racing)


ಪ್ರಶ್ನೆ 6: ಪ್ರಾಚೀನ ಕಾಲದಲ್ಲಿ ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು?


ಉತ್ತರ: ಗ್ರೀಕರು


ಪ್ರಶ್ನೆ 7: ಜಗತ್ತಿನ ಅತಿದೊಡ್ಡ ನದಿ ಯಾವುದು?


ಉತ್ತರ: ಅಮೆಜಾನ್


ಪ್ರಶ್ನೆ 8: ಜಗತ್ತಿನ ಅತಿದೊಡ್ಡ ದ್ವೀಪ ಯಾವ ಸಾಗರದಲ್ಲಿದೆ?


ಉತ್ತರ: ಉತ್ತರ ಅಟ್ಲಾಂಟಿಕ್


ಪ್ರಶ್ನೆ 9: ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು?


ಉತ್ತರ: ಕುವೈತ್


ಪ್ರಶ್ನೆ 10: ಭಾರತದ ಮುತ್ತಿನ ನಗರ ಎಂದು ಯಾವ ನಗರವನ್ನು ಕರೆಯಲಾಗುತ್ತದೆ?


ಉತ್ತರ: ಹೈದರಾಬಾದ್

Wednesday, January 22, 2025

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಅಂದಾಜು ಹೆಚ್ಚಳ



 

ಪಿಂಚಣಿ ನೌಕರರಿಗೆ ಶುಭ ಶುದ್ದಿ

 

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯನ್ನು ದಿನಾಂಕ: 01.08.2024ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಸರ್ಕಾರದಲ್ಲಿ ನೀತಿ-ನಿರ್ಧಾರವನ್ನು ಕೈಗೊಳ್ಳಲಾಗಿರುತ್ತದೆ ಎಂದಿದ್ದಾರೆ.


ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ ಕೈಗೊಳ್ಳಲಾದ ನೀತಿ ನಿರ್ಣಯವನ್ನು ಅನುಷ್ಠಾನಗೊಳಿಸಿ ಹೊರಡಿಸಿರುವ ದಿನಾಂಕ: 23.08.2024ರ ಸರ್ಕಾರಿ ಆದೇಶ ಸಂ: ಆಇ 21 ಎಸ್‌ಆರ್‌ 2024 ಮತ್ತು ದಿನಾಂಕ: 28.08.2024ರ ಸರ್ಕಾರಿ ಆದೇಶ ಸಂ, ಆ-ಪಿಇಎನ್‌/262/2024ರ ಆದೇಶಗಳು ವಿಸ್ತತವಾಗಿದ್ದು ಸ್ವಯಂ-ವೇದ್ಯವಾಗಿರುತ್ತವೆ. ಸದರಿ ನಿಯಮಗಳ ಅವಕಾಶಗಳನ್ವಯ ನೌಕರರ ಪಿಂಚಣಿಯನ್ನು ಪರಿಷ್ಕರಿಸಿ ಮಂಜೂರು ಮಾಡುವ ಬಗ್ಗೆ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಲು ನಿರ್ದೇಶಿಸಿದ್ದಾರೆ.


 


Sunday, January 19, 2025

ಸಾಮಾನ್ಯ ಜ್ಞಾನ

 ಪ್ರಶ್ನೆ 1: ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಯಾರು..?


ಉತ್ತರ: ಸರ್ ಸಿ.ವಿ.ರಾಮನ್


ಪ್ರಶ್ನೆ 2: ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು‌ ಯಾರು?


ಉತ್ತರ: ಉಮಾಶಂಕರ್ ಜೋಶಿ


ಪ್ರಶ್ನೆ 3: ಪ್ರಥಮ ಭಾರತದ ವರ್ಣ ಚಿತ್ರ ಯಾವುದು?


ಉತ್ತರ: ಮೆಹಬೂಬ್


ಪ್ರಶ್ನೆ 4: ಬೇಗಂ ಅಕ್ಟರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ?


ಉತ್ತರ: ಗಜಲ್


ಪ್ರಶ್ನೆ 5: ಭಾರತದ ಹಳೆದಾದ ಇಂಗ್ಲಿಷ್ ಪತ್ರಿಕೆ ಯಾವುದು?


ಉತ್ತರ: The State Man


ಪ್ರಶ್ನೆ 6: ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?


ಉತ್ತರ: ಕಥಕ್


ಪ್ರಶ್ನೆ 7: ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್‌ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತದೆ?


ಉತ್ತರ: ಮಿಲಾ-ಇ-ನಬಿ (ಈದ್ ಮಿಲಾದ್)


ಪ್ರಶ್ನೆ 8: ಅಬನೀಂದ್ರನಾಥ ಟ್ಯಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?


ಉತ್ತರ: ಚಿತ್ರಕಲೆ


ಪ್ರಶ್ನೆ 9: ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ ಯಾವುದು?


ಉತ್ತರ: National Musium of india, ದೆಹಲಿ


ಪ್ರಶ್ನೆ 10: ಸಿಖ್ ಪವಿತ್ರ ʼಗುರು ಗ್ರಂಥ ಸಾಹಿಬ್ʼವನ್ನು ಸಂಗ್ರಹಿಸಿದವರು ಯಾರು?


ಉತ್ತರ: ಗುರು ಅರ್ಜುನ್ ದೇವ

ಪ್ರಶ್ನೆ 1: ಕರ್ನಾಟಕದ ಮೊಟ್ಟ ಮೊದಲ ದೊರೆ ಯಾರು ?


ಉತ್ತರ: ಕದಂಬ ವಂಶದ ಮಯೂರವರ್ಮ


ಪ್ರಶ್ನೆ 2: ಪ್ರಸಿದ್ಧ ಇಂಡಿಯಾ ಹೌಸ್ ಎಲ್ಲಿದೆ?


ಉತ್ತರ: ಲಂಡನ್


ಪ್ರಶ್ನೆ 3: Central Food Technological Research Institute (CFTRI) ಇರುವ ಸ್ಥಳ?


ಉತ್ತರ: ಮೈಸೂರು


ಪ್ರಶ್ನೆ 4: ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದವರು ಯಾರು?


ಉತ್ತರ: ಗುಲ್ಜಾರಿ ಲಾಲ್ ನಂದಾ


ಪ್ರಶ್ನೆ 5: ಜರ್ಮನಿ ಮತ್ತು ಪೋಲಂಡ್ ಮಧ್ಯದ ಗಡಿ ರೇಖೆ ಯಾವುದು?


ಉತ್ತರ: ಹಿಂಡನ್ ಬರ್ಗ್ (Hindenburg)


ಪ್ರಶ್ನೆ 6: ಕರ್ನಾಟಕದ ಅತೀ ಪ್ರಾಚೀನ ದೇವಾಲಯ ಯಾವುದು ?


ಉತ್ತರ: ತಾಳಗುಂದದ ಪ್ರಣವೇಶ್ವರ ದೇವಾಲಯ


ಪ್ರಶ್ನೆ 7: 'ಸಾಂಗ್ ಆಫ್ ದಿ ನಾರ್ಥ್' ಯಾವ ದೇಶದ ರಾಷ್ಟ್ರಗೀತೆ?


ಉತ್ತರ: ಸ್ಪೀಡನ್


ಪ್ರಶ್ನೆ 8: ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳತ್ತದೆ?


ಉತ್ತರ: ಕರಾಚಿ


ಪ್ರಶ್ನೆ 9: ಕಾಮನ್‌ವೆಲ್ತ್ ಕೇಂದ್ರ ಕಚೇರಿ ಇರುವ ಸ್ಥಳ ಯಾವುದು?


ಉತ್ತರ: ಲಂಡನ್


ಪ್ರಶ್ನೆ 10: ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ..?


ಉತ್ತರ: 28

Wednesday, January 8, 2025

ನೀವು ನಿಮ್ಮ FD ಗಳ ಮೇಲೆ 8% ಕ್ಕಿಂತ ಹೆಚ್ಚು ಬಡ್ಡಿದರವನ್ನ ಪಡೆಯಬುದು; ಇಲ್ಲಿದೆ ಮಾಹಿತಿ


ಅದರಲ್ಲೂ 50 ರಿಂದ 75 ವರ್ಷದ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳನ್ನ ನೀಡುತ್ತಿವೆ.

ಸ್ಥಿರ ಠೇವಣಿಗಳು ಹಲವಾರು ಕಾರಣಗಳಿಗಾಗಿ ಪ್ರಮುಖ ಹಣಕಾಸು ಸಾಧನವಾಗಿದೆ. ವಿಶೇಷವಾಗಿ ಸ್ಥಿರ, ಕಡಿಮೆ-ಅಪಾಯದ ಹೂಡಿಕೆ ಆಯ್ಕೆಗಳನ್ನು ಬಯಸುವ ವ್ಯಕ್ತಿಗಳಿಗೆ. ನಿಶ್ಚಿತ ಠೇವಣಿಗಳು ಏಕೆ ಮುಖ್ಯವಾದುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.

ನಿಶ್ಚಿತ ಠೇವಣಿಗಳನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು ಖಾತರಿಯ ಆದಾಯವನ್ನು ನೀಡುತ್ತವೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ಪ್ರಮುಖ ಮೊತ್ತವು ಸುರಕ್ಷಿತವಾಗಿದೆ ಮತ್ತು ಷೇರುಗಳು ಅಥವಾ ಮ್ಯೂಚುಯಲ್ ಫಂಡ್‌ಗಳಂತೆ ಮಾರುಕಟ್ಟೆಯ ಚಂಚಲತೆಯಿಂದ ಪ್ರಭಾವಿತವಾಗುವುದಿಲ್ಲ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಧಿಕಾರಿಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನಿರ್ದಿಷ್ಟ ಮಿತಿಯವರೆಗಿನ ಠೇವಣಿಗಳನ್ನು ವಿಮೆ ಮಾಡಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೊಸ FD ದರ: SBI vs ಪೋಸ್ಟ್ ಆಫೀಸ್.. ಎಲ್ಲಿ ಹೂಡಿಕೆ ಮಾಡಬೇಕು?

ಸ್ಥಿರ ಹೂಡಿಕೆಗಳ ಮೇಲಿನ ಹೆಚ್ಚಿನ ಬಡ್ಡಿದರವನ್ನ ಪಡೆಯುವುದರಿಮದ ಇದು ಸಾಕಷ್ಟು ಲಾಭದಾಯಕವಾಗಿದೆ. ಏಕೆ ಎನ್ನುವುದನ್ನು ಇಲ್ಲಿ ತಿಳಿಯಿರಿ. ಬ್ಯಾಂಕ್ ಎ ಒಂದು ವರ್ಷದ FD ಮೇಲೆ ನಿಮಗೆ 6% ಬಡ್ಡಿದರ ನೀಡುತ್ತಿದೆ. ಹಾಗೆ ಬ್ಯಾಂಕ್ ಬಿ, ಸಣ್ಣ ಬ್ಯಾಂಕ್‌ 7.5% ನೀಡುತ್ತದೆ. ನೀವು ಬ್ಯಾಂಕ್ B ಯಲ್ಲಿ 10 ಲಕ್ಷ ರೂ. ಠೇವಣಿ ಮಾಡಿದರೆ ಅದರಲ್ಲಿ ನೀವು 75,000 ರೂ. ಹೆಚ್ಚು ಗಳಿಸುತ್ತೀರಿ. ಬ್ಯಾಂಕ್ ಎಯಲ್ಲಿ ನೀವು ಅಷ್ಟೇ ಮೊತ್ತವನ್ನ ಠೇವಣಿ ಮಾಡಿದ್ರೆ 60,000 ರೂ ಹೆಚ್ಚು ಗಳಿಸುತ್ತೀರಿ. ಅಂದರೆ ಈ ಎರಡರಲ್ಲಿ 15,000 ವ್ಯತ್ಯಾಸವನ್ನ ನೀವು ಕಾಣಬಹುದು. ಇದರಲ್ಲಿ ಯಾವುದು ಲಾಭ ಎನ್ನುವುದನ್ನು ನಿಮಗೆ ತಿಳಿಯುತ್ತದೆ.

FD ದರಗಳು: ಈ 6 ಬ್ಯಾಂಕ್‌ಗಳು ನಿಮಗೆ ದೀರ್ಘಾವಧಿಯ FDಯ ಮೇಲೆ ಹೆಚ್ಚಿನ ದರವನ್ನ ನೀಡುತ್ತವೆ!

ಇದರಲ್ಲಿ ಕೆಲವು ಅಪಾಯಗಳು ಕೂಡ ಒಳಗೊಂಡಿವೆ

ನಿಮ್ಮ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಆದಾಯವನ್ನ ನೀಡುತ್ತಿವೆ ಎಂದರೆ ಅದು ಕೆಲವು ಅಪಾಯಗಳನ್ನ ಕೂಡ ಒಳಗೊಂಡಿರುತ್ತದೆ. ಅಲ್ಲದೆ ಈ ಸಣ್ಣ ಬ್ಯಾಂಕ್‌ಗಳು ಕೆಲವೊಮ್ಮೆ ಸ್ಥಿರವಾಗಿಲ್ಲದೆ ಇರಬಹುದು. ಇದರ ಬಗ್ಗೆ ಇಲ್ಲಿ ತಿಳಿಯಿರಿ.

1. ಬ್ಯಾಂಕ್‌ ಸ್ಥಿರತೆ: ಈ ಸಣ್ಣ ಬ್ಯಾಂಕ್‌ಗಳು ಆರ್ಥಿಕವಾಗಿ ಸದೃಢವಾಗಿದೆಯಾ ಎನ್ನುವುದನ್ನು ನೀವು ತಿಳಿಯಲು ಆ ಬ್ಯಾಂಕ್‌ನ ಕ್ರೆಡಿಟ್‌ ರೆಟಿಂಗ್‌ಗಳನ್ನು ಪರಿಶೀಲನೆ ಮಾಡಬೇಕು. ಅಲ್ಲದೆ ಅದೇನಾದ್ರು ಕಡಿಮೆ ರೇಟಿಂಗ್‌ ಹೊಂದಿದ್ದರೆ ಅತೀ ಹೆಚ್ಚು ಅಪಾಯವನ್ನ ಅದು ಹೊಂದಿರುತ್ತದೆ ಎನ್ನುವುದನ್ನು ನೀವು ಅರಿತಿರಬೇಕು.

2. ಠೇವಣಿ ವಿಮೆ: ನಿಮ್ಮ ಠೇವಣಿ 5 ಲಕ್ಷಕ್ಕಿಂತ ಹೆಚ್ಚಿದ್ದರೆ, ಹೆಚ್ಚುವರಿ ಮೊತ್ತವನ್ನ ವಿಮೆ ಮಾಡಲು ಆಗುವುದಿಲ್ಲ. ನಿಮ್ಮ ಠೇವಣಿ 5 ಲಕ್ಷ ಇದ್ದರೆ ಡಿಐಸಿಜಿಸಿ ವಿಮೆ ಮಾಡುತ್ತದೆ. ಇದು ಅಸಲು ಮತ್ತು ಬಡ್ಡಿ ಎರಡನ್ನೂ ಕೂಡ ಒಳಗೊಂಡಿರುತ್ತದೆ.

3. ಲಿಕ್ವಿಡಿಟಿ: ಸಣ್ಣ ಬ್ಯಾಂಕ್‌ಗಳಲ್ಲಿ ಲಿಕ್ವಿಡಿಟಿ ಸಮಸ್ಯೆ ಇರಬಹುದು. ಇದು ಅವರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನಿಮ್ಮ ಠೇವಣಿಗಳ ಮೇಲು ಕೂಡ ಇದು ಪರಿಣಾಮ ಬೀರಬಹುದು.

ಈ ಬ್ಯಾಂಕ್‌ನಲ್ಲಿ FD ಇಡಿ; 8.10% ಆದಾಯ ಖಚಿತ.. ಲಾಸ್ಟ್ ಡೇಟ್ ಯಾವುದು?

ಬ್ಯಾಂಕ್‌ಗಳನ್ನು ಆಯ್ಕೆ ಮಾಡುವುದು ಹೇಗೆ?

ಸ್ಥಿರ ಠೇವಣಿಗಾಘಿ ಯಾವ ಬ್ಯಾಂಕ್‌ಗಳು ಸೂಕ್ತ ಎಂದು ಹೇಗೆ ನಿರ್ಧಾರ ಮಾಡಬೇಕು ಎನ್ನುವುದನ್ನು ನೀವು ಇಲ್ಲಿ ತಿಳಿಯಿರಿ.

1. ಬ್ಯಾಂಕ್‌ ಅನ್ನು ಸಂಶೋಧಿಸಿ: ಬ್ಯಾಂಕಿನ ಆರ್ಥಿಕ ಸ್ಥಿರತೆ ಬಗ್ಗೆ ತಿಳಿಯಿರಿ. ಬ್ಯಾಂಕ್‌ನ ಕುರಿತು ಇರುವ ವಿಮರ್ಶೆ ಹಾಗೆ ಸುದ್ದಿಗಳನ್ನ ಪರಿಶೀಲನೆ ಮಾಡಬೇಕು. ಅಲ್ಲದೆ ಇಂತಹ ಸಮಸ್ಯೆಗಳನ್ನ ಆ ಬ್ಯಾಂಕ್‌ ಇತ್ತೀಚಿನ ದಿನಗಳಲ್ಲಿ ಎದುರಿಸಿದೆಯಾ ಎನ್ನುವುದನ್ನು ನೀವು ತಿಳಿದಿರಬೇಕು.

2. ನಿಮ್ಮ ಠೇವಣಿಯನ್ನು ಮಿತಿಗೊಳಿಸಿ: ನೀವು ನಿಮ್ಮ ಠೇವಣಿ ಮೊತ್ತವನ್ನ 5 ಲಕ್ಷಕ್ಕಿತ ಕಡಿಮೆ ಇರಲಿ. ಇದರಿಂದಾಗಿ ನಿಮ್ಮ ಹಳ ಕೂಡ ಸುರಕ್ಷಿತವಾಗಿರುತ್ತದೆ.

3. ವೈವಿಧ್ಯಗೊಳಿಸಿ: ನಿಮ್ಮ ಎಲ್ಲಾ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇರಿಸಬೇಡಿ. ಅದನ್ನಿ ವಿವಿಧ ಬ್ಯಾಂಕುಗಳ ನಡುವೆ ವಿಭಜನೆ ಮಾಡಿ. ಇದರಿಂದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.

4. ದರಗಳ ಕುರಿತು ಪರಿಶೀಲಿಸಿ: ಬ್ಯಾಂಕ್‌ನ ಗ್ರಾಹಕ ಸೇವೆಯನ್ನು ಪರಿಶೀಲಿಸಿ. ಆ ಬ್ಯಾಂಕ್‌ನ ಕುರಿತು ಯಾವುದಾದ್ರು ಆರೋಪಗಳಿದ್ದರೆ ಆ ಕುರಿತು ಒಮ್ಮೆ ಪರಿಶೀಲನೆ ಮಾಡಿ.

ನೀವು ಅಲ್ಪಾವಧಿಯ ಸ್ಥಿರ ಠೇವಣಿಗಾಘಿ ನೀವು ಸಣ್ಣ ಬ್ಯಾಂಕ್‌ಗಳನ್ ಆಯ್ಕೆ ಮಾಡಬಹುದು ಎಂದು Bankbazaar.com ನ ಸಿಇಒ ಆದಿಲ್‌ ಶೆಟ್ಟಿ ಆಬಿಪ್ರಾಯಪಟ್ಟಿದ್ದಾರೆ. ಇನ್ನು ದೀರ್ಘಾವಧಿಯ ಭದ್ರತೆಗಾಗಿ ನೀವು ದೊಡ್ಡ ಬ್ಯಾಂಕ್‌ಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಹೂಡಿಕೆ ಆದಾಯದ ಹೆಚ್ಚಳಕ್ಕಾಗಿ ನೀವು ಹೆಚ್ಚು ಬಡ್ಡಿದರಗಳನ್ನ ನೀಡುವ ಬ್ಯಾಂಕ್‌ಗಳನ್ನ ಆಯ್ಕೆ ಮಾಡಬಹುದು.

ಹೆಚ್ಚು ಬಡ್ಡಿ ದರಗಳನ್ನ ನೀಡುವ ಸಣ್ಣ ಬ್ಯಾಂಕ್‌ಗಳ ಕುರಿತು ನೀವು ಇಲ್ಲಿ ತಿಳಿಯಿರಿ.

ಬ್ಯಾಂಕ್‌ FD ಬಡ್ಡಿ ದರಗಳು

ಬ್ಯಾಂಕ್‌ 1-2 ವರ್ಷಗಳು

RBL ಬ್ಯಾಂಕ್ - 8

ಡಾಯ್ಚ ಬ್ಯಾಂಕ್ - 8

ಬಂಧನ್ ಬ್ಯಾಂಕ್ - 8.05

ಡಿಸಿಬಿ ಬ್ಯಾಂಕ್ - 8.05

AU ಸಣ್ಣ ಹಣಕಾಸು ಬ್ಯಾಂಕ್ - 8

ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್ - 8.15

ESAF ಸಣ್ಣ ಹಣಕಾಸು ಬ್ಯಾಂಕ್ - 8.25

ಜನ ಸಣ್ಣ ಹಣಕಾಸು ಬ್ಯಾಂಕ್ - 8.25

ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್ - 8.5

ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ - 8.5

ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್ - 8.25

ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ

ಕರ್ನಾಟಕ ಕಂಡ 25 ಸಿಎಂಗಳಲ್ಲಿ ಇದುವರೆಗೆ 5 ವರ್ಷ ಪೂರ್ಣಗೊಳಿಸಿದ್ದು ಈ ಮೂವರು ಮಾತ್ರ- ಎಲ್ಲರೂ ಕಾಂಗ್ರೆಸ್ಸಿಗರೇ

ಅದರಲ್ಲೂ ಈ ಮೂವರು ಮುಖ್ಯಮಂತ್ರಿಗಳು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ನಾಯಕರಾಗಿದ್ದಾರೆ.

ಹೌದು, ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದು, ಇದುವರೆಗೂ ಮೂವರು ಮಾತ್ರ ಐದು ವರ್ಷ ಅಧಿಕಾರವನ್ನ ಪೂರ್ಣಗೊಳಿಸಿದ್ದಾರೆ. ಬಿಜೆಪಿಯಿಂದ ಹಲವು ನಾಯಕರು ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಜೆಡಿಎಸ್‌ ನಿಂದಲೂ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವನ್ನ ನಡೆಸಿದ್ದಾರೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ನಿಂದ ಆಯ್ಕೆಯಾದ ಸಿಎಂಗಳ ಯಾರು ಸಹ ಇದುವರೆಗೂ ಐದು ವರ್ಷ ಅಧಿಕಾರವನ್ನ ನಡೆಸಿಲ್ಲ. ಕಾಂಗ್ರೆಸ್‌ ನಿಂದ ಆಯ್ಕಾಯಾದ ಮೂವರು ಸಿಎಂಗಳು ಅಧಿಕಾರವನ್ನ ಐದು ವರ್ಷ ಪೂರೈಸಿದ್ದಾರೆ.

ಕರ್ನಾಟಕ ಕಂಡ 25 ಮುಖ್ಯಮಂತ್ರಿಗಳಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಮೂವರು ಮುಖ್ಯಮಂತ್ರಿಗಳಿಗೆ ಮಾತ್ರ ಸಾಧ್ಯವಾಗಿದೆ. ಎಸ್ ನಿಜಲಿಂಗಪ್ಪ (1962-68), ಡಿ ದೇವರಾಜ ಅರಸು (1972-77) ಮತ್ತು ಸಿದ್ದರಾಮಯ್ಯ (2013-2018) ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮೂವರು ನಾಯಕರು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿ ಮುಖ್ಯಮಂತ್ರಿಗಳಾಗಿದ್ದಾರೆ.


ಕರ್ನಾಟಕ ಇತಿಹಾಸ ಕಂಡ ಸಿಎಂಗಳ ಪಟ್ಟಿ ಇಲ್ಲಿದೆ

1. ಕೆ. ಚೆಂಗಲರಾಯ ರೆಡ್ಡಿ: ಕಾಂಗ್ರೆಸ್, ಅಕ್ಟೋಬರ್ 25, 1947 - ಮಾರ್ಚ್ 30, 1952

2. ಕೆಂಗಲ್ ಹನುಮಂತಯ್ಯ: ಕಾಂಗ್ರೆಸ್, ಮಾರ್ಚ್ 30, 1952 - ಆಗಸ್ಟ್ 19, 1956

3. ಕಡಿದಾಳ್ ಮಂಜಪ್ಪ: ಕಾಂಗ್ರೆಸ್, ಆಗಸ್ಟ್ 19, 1956 - ಅಕ್ಟೋಬರ್ 31, 1956

4. ಎಸ್.ನಿಜಲಿಂಗಪ್ಪ: ಕಾಂಗ್ರೆಸ್, ನವೆಂಬರ್ 1, 1956 - ಮೇ 16, 1958

5. ಬಿ.ಡಿ.ಜತ್ತಿ: ಕಾಂಗ್ರೆಸ್, ಮೇ 16, 1958 - ಮಾರ್ಚ್ 9, 1962

6. ಎಸ್ ಆರ್ ಕಂಠಿ: ಕಾಂಗ್ರೆಸ್, ಮಾರ್ಚ್ 14, 1962 - ಜೂನ್ 20, 1962

7. ಎಸ್.ನಿಜಲಿಂಗಪ್ಪ: ಕಾಂಗ್ರೆಸ್, ಜೂನ್ 21, 1962 - ಮೇ 28, 1968

8. ವೀರೇಂದ್ರ ಪಾಟೀಲ್: ಕಾಂಗ್ರೆಸ್, ಮೇ 29, 1968 - ಮಾರ್ಚ್ 18, 1971

ರಾಷ್ಟ್ರಪತಿ ಆಳ್ವಿಕೆ: 19 ಮಾರ್ಚ್ 1971 - 20 ಮಾರ್ಚ್ 1972

9 . ಡಿ.ದೇವರಾಜ್ ಅರಸ್: ಕಾಂಗ್ರೆಸ್, ಮಾರ್ಚ್ 20, 1972 - ಡಿಸೆಂಬರ್ 31, 1977

ರಾಷ್ಟ್ರಪತಿ ಆಳ್ವಿಕೆ: ಡಿಸೆಂಬರ್ 31, 1977 - ಫೆಬ್ರವರಿ 28, 1978

10. ಡಿ.ದೇವರಾಜ್ ಅರಸ್: ಕಾಂಗ್ರೆಸ್, ಫೆಬ್ರವರಿ 28, 1978 - ಜನವರಿ 7, 1980

11. ಆರ್ ಗುಂಡೂರಾವ್: ಕಾಂಗ್ರೆಸ್, ಜನವರಿ 12, 1980 - ಜನವರಿ 6, 1983

12. ರಾಮಕೃಷ್ಣ ಹೆಗಡೆ: ಜನತಾ ಪಕ್ಷ, ಜನವರಿ 10, 1983 - ಆಗಸ್ಟ್ 10, 1988

13. ಎಸ್ ಆರ್ ಬೊಮ್ಮಾಯಿ: ಜನತಾ ಪಕ್ಷ, ಆಗಸ್ಟ್ 13, 1988 - ಏಪ್ರಿಲ್ 21, 1989

ರಾಷ್ಟ್ರಪತಿ ಆಳ್ವಿಕೆ: ಏಪ್ರಿಲ್ 21, 1989 - ನವೆಂಬರ್ 30, 1989

14. ವೀರೇಂದ್ರ ಪಾಟೀಲ್: ಕಾಂಗ್ರೆಸ್, ನವೆಂಬರ್ 30, 1989 - ಅಕ್ಟೋಬರ್ 10, 1990

ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್ 10, 1990 - ಅಕ್ಟೋಬರ್ 17, 1990

15. ಎಸ್ ಬಂಗಾರಪ್ಪ: ಕಾಂಗ್ರೆಸ್, ಅಕ್ಟೋಬರ್ 17, 1990 - ನವೆಂಬರ್ 19, 1992

16.ಎಂ.ವೀರಪ್ಪ ಮೊಯ್ಲಿ: ಕಾಂಗ್ರೆಸ್, ನವೆಂಬರ್ 19, 1992 - ಡಿಸೆಂಬರ್ 11, 1994

17: ಎಚ್ ಡಿ ದೇವೇಗೌಡ: ಜನತಾ ದಳ, ಡಿಸೆಂಬರ್ 11, 1994 - ಮೇ 31, 1996

18. ಜೆ ಎಚ್ ಪಟೇಲ್ : ಜನತಾ ದಳ, ಮೇ 31, 1996 - ಅಕ್ಟೋಬರ್ 07, 1999

19. ಎಸ್ ಎಂ ಕೃಷ್ಣ : ಕಾಂಗ್ರೆಸ್, ಅಕ್ಟೋಬರ್ 11, 1999 - ಮೇ 28, 2004

20.ಧರಂ ಸಿಂಗ್: ಕಾಂಗ್ರೆಸ್, ಮೇ 28, 2004 - ಫೆಬ್ರವರಿ 2, 2006

21. ಎಚ್ ಡಿ ಕುಮಾರಸ್ವಾಮಿ: ಜೆಡಿಎಸ್, ಫೆಬ್ರವರಿ 3, 2006 - ಅಕ್ಟೋಬರ್ 8, 2007

ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್ 8, 2007 - ನವೆಂಬರ್ 12, 2007

22. ಬಿಎಸ್ ಯಡಿಯೂರಪ್ಪ: ಬಿಜೆಪಿ, ನವೆಂಬರ್ 12, 2007 - ನವೆಂಬರ್ 19, 2007,

ರಾಷ್ಟ್ರಪತಿ ಆಳ್ವಿಕೆ: ನವೆಂಬರ್ 20, 2007 - ಮೇ 29, 2008

23. ಬಿಎಸ್ ಯಡಿಯೂರಪ್ಪ: ಬಿಜೆಪಿ, ಮೇ 30, 2008 - ಆಗಸ್ಟ್ 4, 2011

24. ಡಿವಿ ಸದಾನಂದ ಗೌಡ: ಬಿಜೆಪಿ, 5 ಆಗಸ್ಟ್ 2011 - ಜುಲೈ 11, 2012

25. ಜಗದೀಶ ಶಿವಪ್ಪ ಶೆಟ್ಟರ್: ಬಿಜೆಪಿ, ಜುಲೈ 12, 2012 - 8 ಮೇ 2013

26. ಸಿದ್ದರಾಮಯ್ಯ: ಕಾಂಗ್ರೆಸ್, ಮೇ 13, 2013 - ಮೇ 15, 2018

27.ಬಿಎಸ್ ಯಡಿಯೂರಪ್ಪ: ಬಿಜೆಪಿ, ಮೇ 17, 2018 - ಮೇ 23, 2018

28. ಎಚ್ ಡಿ ಕುಮಾರಸ್ವಾಮಿ: ಜೆಡಿಎಸ್, ಮೇ 23, 2018 - 23 ಜುಲೈ 2019

29.ಬಿಎಸ್ ಯಡಿಯೂರಪ್ಪ: ಬಿಜೆಪಿ, 26 ಜುಲೈ 2019 - 26 ಜುಲೈ 2021

30. ಬಸವರಾಜ ಬೊಮ್ಮಾಯಿ: ಬಿಜೆಪಿ, 28 ಜುಲೈ 2021-13 ಮೇ 2023

31: ಸಿದ್ದರಾಮಯ್ಯ ಕಾಂಗ್ರೆಸ್, 20 ಮೇ 2023-NA

Tuesday, January 7, 2025

ಯುವನಿಧಿ

https://sevasindhugs.karnataka.gov.in/
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಯುವನಿಧಿ ಯೋಜನೆಯಲ್ಲಿ 2022 -23 ಮತ್ತು 2023-24 ನೇ ಸಾಲಿನಲ್ಲಿ ಸ್ನಾತಕ ಪದವಿ/ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ https://sevasindhugs.Karnataka.gov.inನಲ್ಲಿ ನೊಂದಾಯಿಸಿಕೊಳ್ಳಲು ಜನವರಿ 6 ರಿಂದ 20 ರ ವರೆಗೆ ವಿಶೇಷ ನೊಂದಣಿ ಅಭಿಯಾನವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಹಮ್ಮಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಯುವನಿಧಿ ಅಡಿ ಪದವೀಧರರಿಗೆ ಪ್ರತಿ ತಿಂಗಳು ರೂ.3000 ಹಾಗೂ ಡಿಪ್ಲೋಮಾ ಪದವಿದರರಿಗೆ ರೂ.1500 ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿ ಹೆಸರನ್ನು ನೋಂದಾಯಿಸಿಕೊoಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.

ನಂತರ ಪ್ರತಿ ತಿಂಗಳು ಯುವ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಿದ್ದರೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಮಾಹೆಯಾನ ತಾನು ನಿರುದ್ಯೋಗಿ ಎಂದು ಉನ್ನತ ವ್ಯಾಸಂಗ ಮುಂದುವರಿಸುತ್ತಿಲ್ಲವೆoದು ಹಾಗೂ ಸ್ವಯಂ ಉದ್ಯೋಗಿ ಅಲ್ಲವೆಂದು ಪ್ರತಿ ತಿಂಗಳ 25ನೇ ತಾರೀಕಿನೊಳಗಾಗಿ ಸ್ವಯಂ ಘೋಷಣೆಯನ್ನು ಮಾಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಸ್ವಯಂ ಘೋಷಣೆ ಆಧಾರದ ಮೇಲೆ ಅಭ್ಯರ್ಥಿಗಳು ಮುಂದಿನ ಪಾವತಿಯನ್ನು ಸ್ವೀಕರಿಸಲಾಗುವುದು.

ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಒನ್/ಗ್ರಾಮವನ್ನು ಮತ್ತು ಬಾಪೂಜಿ ಕೇಂದ್ರಗಳಲ್ಲಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಮೊಬೈಲ್ ನಂಬರನ್ನು ಹೊಂದಿರತಕ್ಕದ್ದು ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧು ಪೋರ್ಟಲ್ ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು ಒಂದು ವೇಳೆ ಅರ್ಜಿಯು ಅಪ್ರೂವ್ ಆಗದ ಸಂದರ್ಭದಲ್ಲಿ ಸೂಚಿಸಲ್ಪಟ್ಟ ಇಲಾಖೆಯ ಕಚೇರಿಗಳಿಗೆ ತಮ್ಮ ಎಲ್ಲ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ಅಪ್ರೂವ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಲ್ಲಿಗೆ ಕರೆ ಮಾಡಿ

ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ವಿನಿಮಯ ಕಚೇರಿಯ ದೂ.ಸಂ:9113982513, 8748984360,9986263695 ನ್ನು ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು www.sevasindhugs.karnataka.gov.in ನಲ್ಲಿಯೂ ನೋಂದಾಯಿಸಲು ಅವಕಾಶವನ್ನೂ ಮಾಡಿಕೊಡಲಾಗಿದೆ. ಯೋಜನೆಯ ಅರ್ಹ ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ಪ್ರತಿ ತಿಂಗಳ 1 ರಿಂದ 25ನೇ ತಾರೀಖಿನೊಳಗೆ ಘೋಷಣೆಯನ್ನು ಆನ್ ಲೈನ್ ನಲ್ಲಿ ಈ ಮೇಲೆ ತಿಳಿಸಲಾದ ಅಂತರ್ಜಾಲ ತಾಣದಿಂದ ಅಥವಾ ಸಹಾಯವಾಣಿ ಸಂಖ್ಯೆ:1800-599-9918 ಯಿಂದ ಪಡೆಯಲು ಸಾಧ್ಯವಿದೆ.

ಏನಿದು ಯೋಜನೆ

ಯುವನಿಧಿ ಯೋಜನೆಯು 2023ನೇ ಸಾಲಿನಲ್ಲಿ ಪದವಿ/ಡಿಪ್ಲೋಮೊ ಪಡೆದು ನಂತರ 180 ದಿನಗಳವರೆಗೆ ಉದ್ಯೋಗ ಹೊಂದಿರದ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ಅನುಕ್ರಮವಾಗಿ ರೂ.3000 ಹಾಗೂ ರೂ.1500 ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆ. ಎರಡು ವರ್ಷದವರೆಗೂ ಈ ನಿಧಿಯನ್ನುಉದ್ಯೋಗ ಸಿಗುವವರೆಗೆ ಪಡೆಬಹುದು.

ಸರ್ಕಾರಿ/ ಸರ್ಕಾರಿ ಅನುದಾನಿತ ಸಂಸ್ಥೆ / ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು. ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು. ವಿದ್ಯಾಭ್ಯಾಸವನ್ನು ಮುಂದುವರೆಸುವ ಅಭ್ಯರ್ಥಿಗಳು ಪಡೆಯಲು ಅವಕಾಶವಿಲ್ಲ. ನಿರುದ್ಯೋಗಿಗಳಾಗಿದ್ದರೆ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿ ವೇತನ

ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಬಹುತೇಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಪರದಾಡುತ್ತಿದ್ದಾರೆ. ಮೂರು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಬರೀ ಭರವಸೆ ಸಿಕ್ಕಿದೆಯೇ ಹೊರತು ವಿದ್ಯಾರ್ಥಿ ವೇತನ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ಲಭ್ಯವಾಗಿಲ್ಲ.


'ಕೋವಿಡ್ ಸಮಸ್ಯೆಯಿಂದ ಎಂಜಿನಿಯರಿಂಗ್‌ ಮತ್ತಿತರ ಪದವಿಗಳ ಅವಧಿ ಕಡಿಮೆ ಮಾಡಲಾಯಿತು. ಆದರೆ, ವೈದ್ಯಕೀಯ ಶಿಕ್ಷಣದಲ್ಲಿ ಇದು ಸಾಧ್ಯವಾಗಲಿಲ್ಲ. ಪೂರ್ಣ ಅವಧಿ ಮುಗಿಸಲೇಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅವಧಿ ಕಡಿಮೆ ಮಾಡಿದ ಪದವಿಗಳ ವಿದ್ಯಾರ್ಥಿ ವೇತನ ನಿಲ್ಲಿಸಲಾಯಿತು. ಅದರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳ ವೇತನವೂ ನಿಲ್ಲಿಸಲಾಗಿದೆ. 2024ನೇ ಸಾಲಿಗೆ ಬರಬೇಕಿದ್ದ ₹55,500 ನಮ್ಮ ಕೈ ಸೇರಿಲ್ಲ' ಎಂಬುದು ವಿದ್ಯಾರ್ಥಿಗಳ ಅಳಲು.


'ರಾಜ್ಯದ ಖಾಸಗಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಇಂಥ ವಿದ್ಯಾರ್ಥಿಗಳ ಸಂಖ್ಯೆ 80 ಸಾವಿರಕ್ಕೂ ಹೆಚ್ಚಿದೆ. 7,000ಕ್ಕೂ ಹೆಚ್ಚು ಎಂಬಿಎ ಎಂಸಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳು ಇದ್ದಾರೆ. ಶಿಷ್ಯವೇತನ ನಂಬಿ ಪ್ರವೇಶ ಪಡೆದವರು ಸಾಕಷ್ಟಿದ್ದಾರೆ. ಸರ್ಕಾರದ ಧೋರಣೆಯ ಕಾರಣ ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳ ಉನ್ನತ ಶಿಕ್ಷಣ ಅಡಕತ್ತರಿಗೆ ಸಿಕ್ಕಿಕೊಂಡಿದೆ' ಎಂಬುದು ಹಲವರ ದೂರು.


'ಎರಡು ವರ್ಷಗಳ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಶೇ 30ರಷ್ಟು ಮಂದಿಗೆ ಮಾತ್ರ ಹಣ ಬಂದಿದೆ. ಉಳಿದವರಿಗೆ ಕೈ ತಪ್ಪಿದೆ. ಇದಕ್ಕೆ ಸ್ಪಷ್ಟ ಕಾರಣವನ್ನೇ ನೀಡಿಲ್ಲ. ಕಳೆದ ವರ್ಷವಂತೂ ಎಲ್ಲರ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಈ ಬಗ್ಗೆ ಹೋರಾಡಿದರೂ ಕಿವಿಗೊಟ್ಟಿಲ್ಲ. ಸಚಿವ ಶಿವರಾಜ್ ತಂಗಡಗಿ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ' ಎಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ ತಿಳಿಸಿದರು.


ಇದರ ಬಗ್ಗೆ ಕೇಳಿದಾಗ, ಇಲಾಖೆ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು, 'ಸರ್ಕಾರ ಹಣ ಸಂದಾಯ ಮಾಡಿಲ್ಲ' ಎಂಬ ಉತ್ತರ ನೀಡಿದರು.


  ಮಹಾಂತೇಶ ಬಿಳೂರ ಜಿಲ್ಲಾ ಸಂಚಾಲಕ, ಎಐಡಿಎಸ್‌ಒ ಸಂಘಟನೆರಾಜ್ಯ ಸರ್ಕಾರ ಬೇರೆ ಯೋಜನೆ ಗಳಿಗೆ ಸಾವಿರಾರು ಕೋಟಿ ಸುರಿಯುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡದೇ ವಿದ್ಯಾರ್ಥಿವೇತನ ನಿಲ್ಲಿಸಿದೆ.ಸುಮುಖ್‌ ಚೇತನ್‌ ಎಂಬಿಬಿಎಸ್‌ ವಿದ್ಯಾರ್ಥಿ, ಬೆಂಗಳೂರುಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಲ್ಕವಿದ್ದಷ್ಟೇ ಶಿಷ್ಯವೇತನ ಬರುತ್ತಿತ್ತು. ಈಗ ಕಡಿತ ಮಾಡಲಾಗಿದೆ. ಅದನ್ನೂ ನೀಡಲು ವಿಳಂಬ ಮಾಡಲಾಗುತ್ತಿದೆ ಎಚ್.ಎಂ. ಅಂಜಲಿ ಪದವಿ ವಿದ್ಯಾರ್ಥಿನಿ, ಮೈಸೂರುಒಂದೆಡೆ ಶಿಷ್ಯವೇತನ ಕೊಡುತ್ತಿಲ್ಲ. ಇನ್ನೊಂದೆಡೆ ಕಾಲೇಜು ಶುಲ್ಕ ಕಟ್ಟಬೇಕು. ಸಂಕಷ್ಟದಿಂದ ಪಾರಾಗಲು ಪಾರ್ಟ್‌ ಟೈಮ್ ಕೆಲಸ ಮಾಡಬೇಕಾದ ಅನಿವಾರ್ಯ ಬಂದಿದೆ

ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ..V Narayanan Appointed New Isro Chairman

ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ..V Narayanan Appointed New Isro Chairman

( V Narayanan Appointed New Isro Chairman ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಿರಿಯ ವಿಜ್ಞಾನಿ ವಿ.ನಾರಾಯಣನ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯನ್ನಾಗಿ ಭಾರತ ಸರ್ಕಾರ ನೇಮಕ ಮಾಡಿದೆ.ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಅವರ ಅಧಿಕಾರಾವಧಿಯ ಕೊನೆಯ ದಿನವಾದ ಈ ತಿಂಗಳ 14ರಂದು ಅವರು ಅಧಿಕಾರ ಸ್ವೀಕರಿಸುವರು. ಕೇಂದ್ರ ಸರ್ಕಾರದ ಸಂಪುಟದ ನೇಮಕಾತಿ ಸಮಿತಿಯೂ ಈ ಕುರಿತು ಅಧಿಸೂಚನೆ ಹೊರಡಿಸಿದೆ.


ವಿ ನಾರಾಯಣನ್ 1984 ರಲ್ಲಿ ಇಸ್ರೋಗೆ ಸೇರ್ಪಡೆಗೊಂಡರು. ಅವರಿಗೆ ಸುಮಾರು ನಾಲ್ಕು ದಶಕಗಳ ಅನುಭವವಿದೆ. ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ನಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅವರು GSLV Mk Ill ವಾಹನದ C25 ಕ್ರಯೋಜೆನಿಕ್ ಯೋಜನೆಯ ಯೋಜನಾ ನಿರ್ದೇಶಕರಾಗಿದ್ದರು.


ಇಸ್ರೋ ವಿಜ್ಞಾನಿ ಡಾ.ನಾರಾಯಣನ್ ಅವರಿಗೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ. ಇವುಗಳಲ್ಲಿ ಐಐಟಿ ಖರಗ್‌ಪುರದ ಬೆಳ್ಳಿ ಪದಕ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್‌ಐ) ಯಿಂದ ಚಿನ್ನದ ಪದಕ ಮತ್ತು ಎನ್‌ಡಿಆರ್‌ಎಫ್‌ನಿಂದ ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿ ಸೇರಿವೆ.