Search This Blog
Monday, September 30, 2024
ಅಕ್ಟೋಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು
Sunday, September 29, 2024
ಸಾಮಾನ್ಯ ಜ್ಞಾನ
ಗ್ರಂಥಿಗಳು
FDA/SDA". *1991 ರಿಂದ 2019* ರವರೆಗೆ ಪರೀಕ್ಷೆಯಲ್ಲಿ ಕೇಳಿರುವ *ವಿರುದಾರ್ಥಕ ಪದಗಳು
ವಿಟಮಿನ್ಸ್
ಮನೆತನಗಳು ಲಾಂಛನ
ಮನೆತನಗಳು ಲಾಂಛನ
1. ಕದಂಬರು - ಸಿಂಹ
2. ಮೌರ್ಯರು - ಧರ್ಮಚಕ್ರ
3. ಶಾತವಾಹನರು - ಅಶ್ವದಳ
4. ಗಂಗರು - ಮದಗಜ
5. ಬಾದಾಮಿ ಚಾಲುಕ್ಯರು - ವರಾಹ
6. ರಾಷ್ಟ್ರಕೂಟರು - ಗರುಡ
7. ಕಲ್ಯಾಣ ಚಾಲುಕ್ಯರು - ವರಾಹ
8. ವಿಜಯನಗರ ಸಾಮ್ರಾಜ್ಯ - ವರಾಹ
9. ಮೈಸೂರ ಒಡೆಯರು - ಗಂಡಭೇರುಂಡ
10. ಚೋಳರು - ಹುಲಿ
11. ಪಲ್ಲವರು - ನಂದಿ
12. ಚೇರರು - ಮೀನು
ಪ್ರಮುಖ ಕಾಯ್ದೆಗಳು
🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009
ಪ್ರಮುಖ ಕಾಯ್ದೆಗಳು
🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009
ಕನ್ನಡದ ಬಿರುದು→ ಬಿರುದಾಂಕಿತರು..
=====================
ಮುಂಬರುವ VAO PDO SDA & FDA PSI PC ಪರೀಕ್ಷೆಗೆ ...
=====================
1 ದಾನ ಚಿಂತಾಮಣಿ→ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯk
3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು
6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್
10 ನಾಟಕರತ್ನ→ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ→ ದಿನಕರ ದೇಸಾಯಿ
12 ಅಭಿನವ ಪಂಪ→ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ
15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ→ ಶಾಂತಕವಿ
18 ಕಾದಂಬರಿ ಪಿತಾಮಹ→ ಗಳಗನಾಥ
19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ
20 ಸಂತಕವಿ→ ಪು.ತಿ.ನ.
21 ಷಟ್ಪದಿ ಬ್ರಹ್ಮ→ ರಾಘವಾಂಕ
22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ→ ಶ್ರೀಪಾದರಾಯ
27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ
29 ಕವಿ ಚಕ್ರವರ್ತಿ→ ರನ್ನ
30 ಆದಿಕವಿ→ ಪಂಪ
31 ಉಭಯ ಚಕ್ರವರ್ತಿ→ ಪೊನ್ನ
32 ರಗಳೆಯ ಕವಿ→ ಹರಿಹರ
33 ಕನ್ನಡದ ಕಣ್ವ→ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು→ ಕೆಂಪೇಗೌಡ
37 ವರಕವಿ→ ಬೇಂದ್ರೆ
38 ಕುಂದರ ನಾಡಿನ ಕಂದ→ ಬಸವರಾಜ ಕಟ್ಟೀಮನಿ
39 ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್
42 ದಲಿತಕವಿ→ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ→ ಮುಮ್ಮಡಿ ಕೃಷ್ಣರಾಜ ಒಡೆಯರು
*ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ತಪ್ಪದೇ ನಮ್ಮ ಚಾನಲ್ ಲಿಂಕ್ ಅನ್ನು ಶೇರ್ ಮಾಡಿ* 🙏🙏🙏
🙏𝐏𝐋𝐄𝐀𝐒𝐄 𝐒𝐇𝐀𝐑𝐄🙏
==============
📚📚📚📚📚📚📚📚
ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳು
*ಕನ್ನಡ ಸಾಹಿತ್ಯದ ಪ್ರಶ್ನೋತ್ತರಗಳು*
*"ಕನ್ನಡ ಸಾಹಿತ್ಯ"*
=============
*ಮುಂಬರುವ VAO ಕಡ್ಡಾಯ ಕನ್ನಡ ಪರೀಕ್ಷೆಗೆ ...*
=============
1) ಕನ್ನಡದ ಕಾವ್ಯ ಪಿತಾಮಹ ಯಾರು.?
☄ ಪಂಪ
2) ರನ್ನನ ನಾಟಕೀಯ ಕಾವ್ಯ ಯಾವುದು,?
☄ ಗದಾಯುದ್ಧ
3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☄ ಮುಳಿಯ ತಿಮ್ಮಪ್ಪಯ್ಯ
4) ಪಂಪನ ಲೌಕಿಕ ಕಾವ್ಯ ಯಾವುದು.?
☄ವಿಕ್ರಮಾರ್ಜುನ ವಿಜಯ
5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☄ವೈಶಂಪಾಯನ
6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☄ ಕರ್ಣ -ದುರ್ಯೋಧನ
7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☄ ಪಂಪ
8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☄ ಸುಭದ್ರೆ
9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☄ ಪಂಪ ಭಾರತ
10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☄ಪಂಪ ಭಾರತ
11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☄ ಭೀಷ್ಮ
12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☄ಕರ್ಣ
13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☄ ಭೀಷ್ಮ
14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☄ ಕರ್ಣ
15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☄ ಪಂಪ ಭಾರತ
16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☄ ಪಂಪ ಭಾರತ
17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☄14 ಆಶ್ವಾಸಗಳು
18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☄ ತಿ.ನಂ.ಶ್ರೀ
19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☄ ಪಂಪ ಭಾರತ
20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☄ ಟಿ.ಎಸ್.ವೆಂಕಣಯ್ಯ
21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☄ಪಂಪ
22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☄ ವ್ಯಾಸ ಭಾರತ
23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☄ ಕುವೆಂಪು
24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☄ ಕರ್ಣ
25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☄ಸತ್ಯಾಶ್ರಯ ಇರಿವ ಬೆಡಂಗ
26) " ನೆಲಕಿರಿವೆನೆಂದು ಬಗೆದರೆ.? ಛಲಕಿರಿವೆಂ ಪಾಂಡು ಸುತರೋಳಿ ಕೋಲ್ಲಿಸಿದ ನೆಲನಿದು ಪಾಳ್ನೆಲನೆನಗೆ "
ಎಂಬ ಸಾಲು ಬರುವ ಕಾವ್ಯ ಯಾವುದು.?
☄ಗದಾಯುದ್ಧ (ದುರ್ಯೋಧನ)
27) ಸಾಹಿತ್ಯ ಸಂಶೋಧನ ಕೃತಿಯಲ್ಲಿ " ಭೀಮನೇ ನಾಯಕ ರೌದ್ರವೇ " ಮುಖ್ಯ ರಸ ಎಂದವರು ..?
☄ದ.ರಾ.ಬೇಂದ್ರೆ
28) ರನ್ನನು ಸಿಂಹಾವಲೋಕನ ಕ್ರಮದಿಂದ ಬರೆದ ಕಾವ್ಯ ಯಾವುದು,?
☄ ಗದಾಯುದ್ಧ
29) " ಕೃತಿ ಪರೀಕ್ಷಿಪಂಗೆಂಟೆರ್ದೆಯೆ "
ಎಂದು ಸವಾಲು ಹಾಕಿದ ರನ್ನನ ಕೃತಿ ಯಾವುದು..?
☄ಗದಾಯುದ್ಧ
30) 'ರನ್ನ ವರ ಕವಿ , ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ ' ಈ ಹೇಳಿಕೆಯನ್ನು ನೀಡಿರುವವರು..?
☄ ಬಿ.ಎಂ.ಶ್ರೀ
31) " ನಾಟಕೀಯತೆಯಲ್ಲಿ ರನ್ನನು
ಪಂಪನಿಗಿಂತಲೂ ಒಂದು ಕೈ ಮೇಲು " ಎಂದು ಹೇಳಿದವರು .?
☄ರಂ.ಶ್ರೀ.ಮುಗಳಿ
32) ಜೋಳದ ಪಾಳಿ ಎಂದರೆ..?
☄ ಅನ್ನದ ಹಂಗು(ಋಣ)
33) " ನೀರೊಳಗಿರ್ದುಂ
ಬೆಮರ್ತನುರಗಪತಾಕಂ " ಎಂಬ ಉಕ್ತಿ ಬರುವ ಕೃತಿ..?
☄ ಗದಾಯುದ್ಧ
34) ಗದಾಯುದ್ಧ ಸಂಗ್ರಹ ಕೃತಿ ಬರೆದ ಕವಿ ಯಾರು.?
☄ ತಿ.ನಂ.ಶ್ರೀ
35) ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು,?
☄ಅನಂತ ರಂಗಚಾರ್
36) " ಬ್ರಹ್ಮ ಗಣ " ವನ್ನು ಜಯಕೀರ್ತಿ
ಹೀಗೆ ಕರೆದಿದ್ದಾರೆ..?
☄ರತಿ
37) ವಡಿಯ ಪ್ರಸ್ತಾಪ ಕನ್ನಡದಲ್ಲಿ ಮೊದಲಿಗೆ ಮಾಡಿದ ಕೃತಿ ಯಾವುದು..?
☄ಕವಿ ಜಿಹ್ವಾಬಂಧನ
38) ಕಂದ ಪದ್ಯದ ಎಷ್ಟನೇ ಗಣದ ಮೇಲೆ ' ಯತಿ ' ಬರುತ್ತದೆ..?
☄6 ನೇ ಗಣ
39) ಸಂಸ್ಕೃತದ ಆರ್ಯಾಗೀತಿ ; ಪ್ರಾಕೃತದ ' ಸ್ಕಂಧಕ 'ಎಂದಕ್ಕೆ ಕನ್ನಡ ಸಂವಾದ ಪದ ಯಾವುದು,?
☄ಕಂದ ಪದ್ಯ
40) " ಖ್ಯಾತ ಕರ್ನಾಟಕ ವೃತ್ತಗಳು " ಎಂದು ಹೆಸರಿಸಿದವರು.?
☄1ನೇ ನಾಗವರ್ಮ
41) ಅಚ್ಚಗನ್ನಡ ಛಂದಸ್ಸಿನ ಹತ್ತು ಮಟ್ಟುಗಳಲ್ಲಿ ಮೊದಲನೆಯದು,?
☄ಮದನವತಿ
42) ಗೀತಿಕೆಯ ಮೊದಲ ಪ್ರಯೋಗ ಕಂಡು ಬರುವ ಕೃತಿ ಯಾವುದು.. ?
☄ಕವಿರಾಜಮಾರ್ಗ
43) ಪೊಸಗನ್ನಡದಿಂ ವ್ಯಾವರ್ಣಿಸುವೆಂ
ಸತ್ಕೃತಿಯಂ ಎಂದು ಹೇಳಿದವನು ..?
☄ಚಂದ್ರರಾಜ
44) ಕನ್ನಡ ಮೊದಲನೆಯ ವ್ಯಾಕರಣ '
ಶಬ್ಧಸ್ಮೃತಿ ' ಮತ್ತು ಸಂಸ್ಕೃತದಲ್ಲಿ ಕನ್ನಡ ವ್ಯಾಕರಣ" ಕರ್ಣಾಟಕ ಭಾಷಾಭೂಷಣ " ಬರೆದ ಕವಿ ಯಾರು .?
☄2 ನೇ ನಾಗವರ್ಮ
45) ಆಗಮ ಲೌಕಿಕ ವಿರೋಧಮಂ ಕಳೆದು , ಸಾರಾಂಶಮಂ ಕೊಂಡಾ ಹಲವು ಮತಂಗಳನೊಂದು ಮಾಡಿ ಬರೆದ ಕಾವ್ಯ ಯಾವುದು..?
☄ಮದನ ತಿಲಕ
46) 24ನೇ ತೀರ್ಥಕರ ಮಹಾವೀರನ ಕುರಿತು ಚಂಪೂ ಕಾವ್ಯ ಬರೆದ ಕವಿ ಯಾರು,?
☄2ನೇ ನಾಗವರ್ಮ -ವರ್ಧಮಾನ ಪುರಾಣ
47) ಕವಿರಾಜ ಮಾರ್ಗದಲ್ಲಿ ಪ್ರಾಸಾಕ್ಷರವನ್ನು ಹೀಗೆ ಕರೆಯಲಾಗಿದೆ..?
☄ಶಬ್ದಾಲಂಕಾರ
48) ಸುಭಟರ್ಕಳ್, ಕವಿಗಳ್ ,ಸುಪ್ರಭುಗಳ್ ಎಂದು
ವರ್ಣಿಸುವುದಕ್ಕೆ ಕವಿರಾಜಮಾರ್ಗದ ಪ್ರಕಾರ ಯಾವುದು,?
☄ಬಹುವಿಶೇಷಣ
49) ಅಕ್ಷರ ಗಣ ಕನ್ನಡಕ್ಕೆ ಯಾವ ಭಾಷೆಯ ಕೊಡುಗೆ ಯಾಗಿದೆ .?
☄ಸಂಸ್ಕೃತ
50) ಪ್ರಾಸಾಕ್ಷರವು ವಿಸರ್ಗದಿಂದ ಕೊಡಿದ್ದರೆ...?
☄ಅಜಪ್ರಾಸ
Saturday, September 28, 2024
Thursday, September 26, 2024
2024ನೇ ಸಾಲಿನ `ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' ಪ್ರಕಟ : ಪ್ರೊ. ಜಿ.ಬಿ. ಶಿವರಾಜು, ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ
2024ನೇ ಸಾಲಿನ `ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' ಪ್ರಕಟ : ಪ್ರೊ. ಜಿ.ಬಿ. ಶಿವರಾಜು, ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ
ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಗಾಂಧಿವಾದಿ ಪ್ರೊ. ಜಿ.ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗಳು ಆಯ್ಕೆಯಾಗಿವೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಗ್ರಾಮಸ್ವರಾಜ್, ಅಸ್ಪøಶ್ಯತೆ ನಿವಾರಣೆ, ಆರ್ಥಿಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ ಶಿಕ್ಷಣ ಮತ್ತಿತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆ ಮಾಡಿದ ಮಹನೀಯರು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ಕರ್ನಾಟಕ ರಾಜ್ಯ ಸರ್ಕಾರವು 2014 ರಲ್ಲಿ ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ಸ್ಥಾಪಿಸಿ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಶಸ್ತಿ ಫಲಕ ಹಾಗೂ ರೂ.5 ಲಕ್ಷ ನಗದು ಒಳಗೊಂಡಿರುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು 2014 ರಿಂದ ಪ್ರದಾನ ಮಾಡುತ್ತಾ ಬಂದಿದೆ. 2023 ರ ವರೆಗೆ 8 ವ್ಯಕ್ತಿಗಳು ಹಾಗೂ 2 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2024ನೇ ಸಾಲಿನ ಪ್ರಶಸ್ತಿಯು ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರಿಗೆ ಮತ್ತು ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಸಂಸ್ಥೆಗೆ ವಿಂಗಡಿಸಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತವನ್ನು ತಲಾ ರೂ.2.5 ಲಕ್ಷಗಳಂತೆ ಸಮನಾಗಿ ಪುರಸ್ಕಾರ ನೀಡಿ ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಬರುವ ಅಕ್ಟೋಬರ್ 02 ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಸನತ್ಕುಮಾರ್ ಬೆಳಗಲಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೂಡೆ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ಸದಸ್ಯರಾಗಿದ್ದರು.
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತರು
ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ
ನಿವೃತ್ತ ಉಪನ್ಯಾಸಕರಾಗಿರುವ ಪ್ರೊ. ಜಿ.ಬಿ. ಶಿವರಾಜು ಅವರು ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆಯನ್ನು ರೂಪಿಸಲು ಶ್ರಮಿಸಿದ್ದಾರೆ. 73 ವರ್ಷದ ಇವರು ತಮ್ಮ ನಿವೃತ್ತಿ ವೇತನವನ್ನು ಗಾಂಧೀ ವಿಚಾರಗಳನ್ನು ಯುವ ಜನರಿಗೆ ತಲುಪಿಸಲು ವಿನಿಯೋಗಿಸುತ್ತಿದ್ದಾರೆ. ಗಾಂಧಿ ಪ್ರಣೀತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮದ್ಯಪಾನ ಸಂಯಮ ಮಂಡಳಿಗಳ ಸಮನ್ವಯದ ಮೂಲಕ ಗಾಂಧಿ ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಅರಸೀಕೆರೆಯಲ್ಲಿನ ಕಸ್ತೂರ ಬಾ ಗಾಂಧಿ ಆಶ್ರಮದ ಪುನರುಜ್ಜೀವನಗೊಳಿಸಿದ್ದಾರೆ. ಮೂಡಿಗೆರೆಯ ಭಾರತಿ ಬೈಲ್ ಕೇಂದ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆ ಮಾರ್ನೋಮಿದೊಡ್ಡಿ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಟ್ರಸ್ಟ್ನ ಉಪಕೇಂದ್ರವನ್ನು ಸ್ಥಳೀಯರ ಸಹಕಾರದಿಂದ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕಾರ್ಯಾಗಾರವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಂಸ್ಥೆಯ 20 ಎಕರೆಗೂ ಹೆಚ್ಚು ಭೂಮಿಯಲ್ಲಿ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಸ್ಥಳೀಯರ ಸಹಕಾರದೊಂದಿಗೆ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಬರಮತಿ ಮಾದರಿಯ ಆಶ್ರಮ ನಿರ್ಮಾಣ. ಗದಗ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮದ ಮಾದರಿಯನ್ನು ನಿರ್ಮಿಸಿ ಗಾಂಧೀಜಿಯವರ ಬದುಕು ಸಾಧನೆಗಳನ್ನು ಯುವಜನರು ಹಾಗೂ ಗ್ರಾಮೀಣ ಭಾಗದ ಜನರಿಗೆ ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ. ಗಾಂಧೀ ಸಾಹಿತ್ಯ ಸಂಘ, ಹರಿಜನ ಸೇವಕ ಸಂಘ ಮೊದಲಾದ ಸಂಸ್ಥೆಗಳನ್ನು ಪುನರಜ್ಜೀವಗೊಳಿಸಿದ್ದಾರೆ.
ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ
1984 ರ ಅಕ್ಟೋಬರ್ 02 ರಂದು ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದಲ್ಲಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನವು ಸ್ಥಾಪಿಸಿದ ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯು ಕಳೆದ 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ಅಹರ್ನಿಶಿ ದುಡಿಯುತ್ತಿದೆ. ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಸೇರಿದಂತೆ ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.
ಇಲ್ಲಿನ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ಜೊತೆಗೆ ಗಾಂಧೀ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
Sunday, September 15, 2024
Daily GK Quiz: ವಿಶ್ವಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು?
Wednesday, September 11, 2024
5000 ಪಿಂಚಣಿ ಪಡೆಯಲು ಪ್ರತಿ ತಿಂಗಳು 210 ರೂ. ಪಾವತಿಸಬೇಕು
Tuesday, September 10, 2024
Daily GK Quiz: ಅರ್ಜೆಂಟೀನಾದ ರಾಜಧಾನಿ ಯಾವುದು?
Monday, September 9, 2024
Tips for Success : ಈ ಎಲ್ಲವನ್ನು ಎಲ್ಲರಿಗೂ ಹೇಳ್ಬೇಡಿ , ಇದೇ ನೋಡಿ ಯಶಸ್ಸಿನ ಸೀಕ್ರೆಟ್
Sunday, September 1, 2024
ರಾಜ್ಯ ಸರ್ಕಾರದಿಂದ 'ಅತಿಥಿ ಉಪನ್ಯಾಸಕ'ರ ನೇಮಕಾತಿಗೆ ಅರ್ಜಿ ಆಹ್ವಾನ : ಸೆ.7 ಲಾಸ್ಟ್ ಡೇಟ್ | Guest Lecturer Recruitment
Teachers Day 2024: ಶಿಕ್ಷಕರ ದಿನ ಆಚರಿಸುವ ಉದ್ದೇಶ, ಮಹತ್ವವೇನು, ಬೇರೆ ದೇಶಗಳಲ್ಲಿ ಟೀಚರ್ಸ್ ಡೇ ಯಾವಾಗ; ಇಲ್ಲಿದೆ ಮಾಹಿತಿ
Featured Post
-
ಕರ್ನಾಟಕ ಸರ್ಕಾರವು 2026ನೇ ಸಾಲಿನ ಸರ್ಕಾರಿ ರಜೆ ಪಟ್ಟಿಯನ್ನು ಜನರ ಮಾಹಿತಿಗಾಗಿ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರ ಇಂದು(ಗುರುವಾರ) 2026ನೇ ಸಾಲಿಗೆ ಮಂಜೂರು ಮಾಡಿರು...