ಈ ಕುರಿತು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಮನೆ ಬಾಡಿಗೆ ಭತ್ಯೆ ಕಡಿತಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಸಂಘದ ಮನವಿ ಮತ್ತು ವಿವಿಧ ಸುತ್ತೋಲೆಗಳನ್ನು ಉಲ್ಲೇಖಿಸಲಾಗಿದೆ.
ಸುತ್ತೋಲೆಯ ವಿವರಗಳು: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಮನೆ ಬಾಡಿಗೆ ಭತ್ಯೆ (HRA) ಕಡಿತಗೊಳಿಸದಿರಲು ಪತ್ರದಲ್ಲಿ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು, ಸದರಿ ಮನವಿಯ ಕುರಿತು ದಿನಾಂಕ 28-07-2025ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆಕುಕ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಕ್ರಮ ವಹಿಸಲು ಸೂಚಿಸಿದೆ ಎಂದು ಹೇಳಿದೆ.
ಮನೆ ಬಾಡಿಗೆ ಭತ್ಯೆ (ಹೆಚ್‌ಆರ್‌ಎ): ಮನೆ ಬಾಡಿಗೆ ಭತ್ಯೆಯು, ನೌಕರನ/ ನೌಕರಳು ತನ್ನ ವಾಸ ಸ್ಥಾನಕ್ಕಾಗಿ ಭರಿಸುವ ವೆಚ್ಚಕ್ಕೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವಾಗಿದೆ. ಇದನ್ನು ನೌಕರನ ಅಥವಾ ನೌಕರಳ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ನಗರ, ಪಟ್ಟಣಗಳು ಮತ್ತು ಇತರ ವಾಸಸ್ಥಳಗಳ ವರ್ಗೀಕರಣದ ಮೂಲಕ ಇದನ್ನು ಪಾವತಿಸಲಾಗುತ್ತದೆ.
2011ರ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ 2015ರಲ್ಲಿ ವರ್ಗೀಕರಣವನ್ನು ಕೈಗೊಳ್ಳಲಾಗಿದ್ದು, 25 ಲಕ್ಷ ಮತ್ತು ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು "ಎ" ಪ್ರವರ್ಗವೆಂದು, 5 ಲಕ್ಷ ಮತ್ತು ಮೇಲ್ಮಟ್ಟ ಆದರೆ 25 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು "ಬಿ" ಪವರ್ಗವಾಗಿ ಮತ್ತು ಇತರ ಎಲ್ಲಾ ಪಟ್ಟಣಗಳು ಮತ್ತು ಸ್ಥಳಗಳನ್ನು "ಸಿ" ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ.
ಇದನ್ನು ಆಧರಿಸಿ, ಕರ್ನಾಟಕ ರಾಜ್ಯ ಸರ್ಕಾರವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ ಸಂಪೂರ್ಣ ಪ್ರದೇಶವನ್ನು "ಎ" ಪ್ರವರ್ಗವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಪುರಸಭೆ ಪ್ರದೇಶಗಳನ್ನು "ಬಿ" ಪವರ್ಗವಾಗಿ ಮತ್ತು ಇತರ ಎಲ್ಲಾ ಪ್ರದೇಶಗಳನ್ನು "ಸಿ" ಪವರ್ಗವಾಗಿ ವರ್ಗೀಕರಣ ಮಾಡಿದೆ.
ಎಲ್ಲಾ ಪ್ರದೇಶಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳಲ್ಲಿ ಗಣನೀಯ ಹೆಚ್ಚಳಕ್ಕಾಗಿ ಅನೇಕ ಬೇಡಿಕೆಗಳನ್ನು 7ನೇ ವೇತನ ಆಯೋಗವು ಸ್ವೀಕರಿಸಿತ್ತು. ಮನೆ ಬಾಡಿಗೆ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಮನಾಗಿ ಪರಿಗಣಿಸಬೇಕೆಂದು ಕೆಲವರು ಮನವಿ ಮಾಡಿದ್ದರು.
ಆಯೋಗವು ಈ ಬೇಡಿಕೆಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ಮತ್ತು ಪ್ರದೇಶವಾರು ವರ್ಗೀಕರಣವು ನಿಖರವಾಗಿರಬೇಕೆಂಬುದು ಅಭಿಪ್ರಾಯಪಟ್ಟಿದೆ. ಯಾವತ್ತೂ ಯಾವುದೇ ಅಧಿಕಾರ ವ್ಯಾಪ್ತಿಯ ಪರಿಮಿತಿಗಳಿಗೆ ಹೊರ ವಲಯದ ಪ್ರದೇಶಗಳೆಂದು ಇದೇ ಇರುವ ಕಾರಣ, 'ಎ' ಪವರ್ಗದ ಸೌಲಭ್ಯಗಳನ್ನು ಹೊರ ವಲಯದ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯು ಮುಗಿಯದ ಪ್ರಕ್ರಿಯೆಯಾಗಿರುತ್ತದೆ. ಅಲ್ಲದೆ ಹಿಂದಿನ ಬಿಎಂಪಿ ಹೊರ ವಲಯದ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆ (ಹೆಚ್‌ಆರ್‌ಎ) ದರವನ್ನು ಹೆಚ್ಚಿಸುವ ವಿಷಯವು ಈ ಹಿಂದೆ ಅನೇಕ ಆಡಳಿತಾತ್ಮಕ ತೊಂದರೆಗಳನ್ನು ಸೃಷ್ಟಿಸಿದ್ದು, ತಪ್ಪಿಸಬಹುದಾಗಿದ್ದ ಹಲವು ವ್ಯಾಜ್ಯಗಳಿಗೆ ಎಡೆಮಾಡಿ ಕೊಟ್ಟಿತ್ತು ಎಂದು ತಿಳಿದುಬಂದಿರುತ್ತದೆ.
ಈ ಹಿನ್ನಲೆಯಲ್ಲಿ, ಮನೆ ಬಾಡಿಗೆ ಭತ್ಯೆಯನ್ನು ಸಂದಾಯ ಮಾಡುವ ಉದ್ದೇಶಕ್ಕೆ ಪ್ರಸ್ತುತ ಜಾರಿಯಲ್ಲಿರುವ ನಗರಗಳು, ಪಟ್ಟಣಗಳು ಮತ್ತು ಇತರ ಹುದೇಶಗಳ ವರ್ಗೀಕರಣದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಮತ್ತು ಪ್ರಸ್ತುತ ವ್ಯವಸ್ಥೆಯನ್ನು ಮುಂದುವರೆಸಬಹುದು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು. ಮನೆ ಬಾಡಿಗೆ ಭತ್ಯೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ, ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯೋಗವು ಮೂರು ವರ್ಗಗಳ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಶಿಫಾರಸ್ಸು ಮಾಡಿತ್ತು.
No comments:
Post a Comment