Search This Blog

Wednesday, September 8, 2021

kannada grammar

 ಕನ್ನಡ ವರ್ಣಮಾಲೆಯ ಸಂಗ್ರಹ


ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ


ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ


ವರ್ಣಮಾಲೆಯ ವಿಧಗಳು


* ಸ್ವರಗಳು

* ವ್ಯಂಜನಗಳು

* ಯೋಗವಾಹಗಳು


ಸ್ವರಗಳು:13


“ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.


ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ


ಸ್ವರಗಳ ವಿಧಗಳು


* ಹ್ರಸ್ವ ಸ್ವರ

* ದೀರ್ಘ ಸ್ವರ

* ಪ್ಲುತ ಸ್ವರ


ಹ್ರಸ್ವ ಸ್ವರ:6


“ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.


ಉದಾ: ಅ ಇ ಉ ಋ ಎ ಒ


ದೀರ್ಘ ಸ್ವರ:7


“ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.


ಉದಾ: ಆ ಈ ಊ ಏ ಓ ಐ ಔ


ಪ್ಲುತ ಸ್ವರ:


“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.


ಉದಾ: ಅಕ್ಕಾ, ಅಮ್ಮಾ

ಕ್+ಅ=ಕ

ಮ್+ಅ=ಮ

ಯ್+ಅ=ಯ


ಸಂಧ್ಯಾಕ್ಷರಗಳು:4


ಏ, ಐ, ಒ, ಔ




ವ್ಯಂಜನಗಳು:34


“ಸ್ವರಾಕ್ಷರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.


ವ್ಯಂಜನಗಳ ವಿಧಗಳು:2


1. ವರ್ಗೀಯ ವ್ಯಂಜನಾಕ್ಷರಗಳು

2. ಅವರ್ಗೀಯ ವ್ಯಂಜನಾಕ್ಷರಗಳು


ವರ್ಗೀಯ ವ್ಯಂಜನಾಕ್ಷರಗಳು:25


“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.


ಉದಾ:

ಕ ವರ್ಗ – ಕ ಖ ಗ ಘ ಙ

ಚ ವರ್ಗ – ಚ ಛ ಜ ಝ ಞ

ಟ ವರ್ಗ – ಟ ಠ ಡ ಢ ಣ

ತ ವರ್ಗ – ತ ಥ ದ ಧ ನ

ಪ ವರ್ಗ– ಪ ಫ ಬ ಭ ಮ


ವರ್ಗೀಯ ವ್ಯಂಜನಾಕ್ಷರಗಳ ವಿಧಗಳು


* ಅಲ್ಪ ಪ್ರಾಣಾಕ್ಷರಗಳು

* ಮಹಾ ಪ್ರಾಣಾಕ್ಷರಗಳು

* ಅನುನಾಸಿಕಾಕ್ಷರಗಳು




ಅಲ್ಪ ಪ್ರಾಣಾಕ್ಷರಗಳು:10


“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.


ಉದಾ:

ಕ, ಚ, ಟ, ತ, ಪ

ಗ, ಜ, ಡ, ದ, ಬ


ಮಹಾ ಪ್ರಾಣಾಕ್ಷರಗಳು:10


“ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ


ಉದಾ:

ಖ, ಛ ,ಠ, ಧ, ಫ

ಘ, ಝ, ಢ, ಧ, ಭ


ಅನುನಾಸಿಕಾಕ್ಷರಗಳು: 5


“ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”


ಉದಾ:

ಙ, ಞ, ಣ, ನ, ಮ




ಅವರ್ಗೀಯ ವ್ಯಂಜನಾಕ್ಷರಗಳು: 9


“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.


ಉದಾ:

ಯ, ರ, ಲ, ವ, ಶ, ಷ, ಸ ,ಹ, ಳ


ಯೋಗವಾಹಗಳು: 2


“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.


ಅಂ ಅಃ


ಯೋಗವಾಹಗಳ ವಿಧಗಳು


1. ಅನುಸ್ವಾರ ಂ

2. ವಿಸರ್ಗ ಃ


ಅನುಸ್ವಾರ {ಂ}


“ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,


ಉದಾ: ಅಂಕ, ಒಂದು, ಎಂಬ


ವಿಸರ್ಗ {ಃ}


“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ

 ಎನಿಸುವುದು”


ಉದಾ: ಅಂತಃ, ದುಃಖ, ಸಃ, ನಃ

No comments: