1) ಮನುಷ್ಯನ ದೇಹದ.
ಉತ್ತರ : ಶೇ. 4 ಭಾಗ ಖನಿಜಗಳಿಂದ ಕೂಡಿದೆ.
2) ಮನುಷ್ಯನ ದೇಹದಲ್ಲಿ " ಅಯೊಡಿನ್" ಪ್ರಮುಖವಾಗಿರುವ ಅಂಗವೆಂದರೆ.
ಉತ್ತರ : ಥೈರಾಯಿಡ್ ಗ್ರಂಥಿ.
3) ಮನುಷ್ಯನ ದೇಹದಲ್ಲಿ " ಕ್ಲೋರಿನ್" ಪ್ರಮುಖವಾಗಿರುವ ಅಂಗವೆಂದರೆ.
ಉತ್ತರ : ಜೀವಕೋಶದ ಹೊರದ್ರವರ.
4) ಮನುಷ್ಯನ ದೇಹದಲ್ಲಿ " ಕಬ್ಬಿಣ " ಪ್ರಮುಖವಾಗಿರುವ ಅಂಗವೆಂದರೆ.
ಉತ್ತರ : ರಕ್ತಕಣ.
5) ಮನುಷ್ಯನ ದೇಹದಲ್ಲಿ " ರಂಜಕ" ವು ಪ್ರದಾನವಾಗಿರುವ ಅಂಗವೆಂದರೆ.
ಉತ್ತರ : ಮೂಳೆ.
6) ಹಲ್ಲಿನ ಶಿಥಿಲೀಕರಣವನ್ನು ತಡೆಯುವ ಕೆಲಸವನ್ನು ಈ ಖನಿಜಾಂಶವು ಮಾಡುತ್ತದೆ.
ಉತ್ತರ : ಫ್ಲೋರಿನ್.
7) ' ಥಯಾಮೀನ್' ವಿಟಮಿನ್ (B) ಈ ಖನಿಜದ ಸಂಯುಕ್ತವಾಗಿದೆ.
ಉತ್ತರ : ಗಂಧಕ.
8) ಕೋಬಾಲ್ಟ್ ಖನಿಜವು ಹೊಂದಿರುವ ವಿಟಮಿನ್.
ಉತ್ತರ ವಿಟಮಿನ್ ಬಿ 12.
9) ರಕ್ತದ ಕೆಂಪು ಬಣ್ಣಕ್ಕೆ ಕಾರಣ ಇದು.
ಉತ್ತರ : ಹೀಮ್ ಗ್ಲೋಬಿನ್.
10) ಈ ವಿಟಮಿನ್ ಮೇದಸ್ಸಿನಲ್ಲಿ ಕರಗುವ ವಿಟಮಿನ್ ಅಲ್ಲ.
ಉತ್ತರ : ವಿಟಮಿನ್ ಸಿ.
11) ವಿಟಮಿನ್ ಕೆ ಮತ್ತು ಮೇದಾಮ್ಲಗಳು ಆಮ್ಲಜನಕದೊಂದಿಗೆ ಸಂಯೋಗಗೊಂಡು ಉತ್ಕರ್ಷಿತವಾಗದಂತೆ ರಕ್ಷಿಸುವ ವಿಟಮಿನ್.
ಉತ್ತರ : ವಿಟಮಿನ್ ಈ.
12) ಮನುಷ್ಯನ ಚರ್ಮದಡಿಯಲ್ಲಿರುವ 7
- ಡಿ ಹೈಡ್ರೋಕೊಲೆಸ್ಟ್ರಾಲ್ ಎಂಬ ಹೈಡ್ರೋ ರಾಸಾಯನಿಕವನ್ನು ವಿಟಮಿನ್ ಡಿ ಆಗಿ ಮಾರ್ಪಡಿಸುವುದು.
ಉತ್ತರ : ಸೂರ್ಯನ ಬೆಳಕಿನಲ್ಲಿರುವ ಅತಿ ನೇರಳೆ ಕಿರಣಗಳು.
13) ಪ್ರೋಥ್ರಾಂಬಿನ್ ನ ಮುಖ್ಯ ಕೆಲಸ.
ಉತ್ತರ : ರಕ್ತದ ಹೆಪ್ಪುಗಟ್ಟುವಿಕೆ.
14) ಪ್ರೋಥ್ರಾಂಬಿನ್ ಉತ್ಪಾದಿಸುವು.
ಉತ್ತರ : ವಿಟಮಿನ್ ಕೆ.
15) ಈ ಕೆಳಗಿನವುಗಳಲ್ಲಿ ಇದು ವಿಟಮಿನ್ ಬಿ ಗುಂಪಿಗೆ ಸೇರಿಲ್ಲ.
ಉತ್ತರ : ಅಲನಿಮ್.
No comments:
Post a Comment