Search This Blog

Wednesday, September 8, 2021

ಶಾಸನ

 ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ

 ಪಿಟ್ಸ್ ಇಂಡಿಯಾ ಕಾಯ್ದೆ 1784


 ಮುಕ್ತ ವ್ಯಾಪಾರದ ಹೊಸ ಶಕೆ ಈ ಕಾಯ್ದೆಯನ್ವಯ ಆರಂಭವಾಯಿತು

  1813 ರ ಚಾರ್ಟರ್ ಆಕ್ಟ್


 ಬಂಗಾಳದ ಗವರ್ನರ ಈ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‌ನಾದನು

  1833 ರ ಚಾರ್ಟರ್ ಕಾಯ್ದೆ


 ಖಾಯಂ ಜಮೀನ್ದಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ

  ಜಮೀನ್ದಾರರು


 ಖಾಯಂ ಜಮೀನ್ದಾರಿ ಪದ್ಧತಿಯನ್ವಯ ಭೂಮಾಲೀಕರಾದವರು

 ಜಮೀನ್ದಾರರು


 ಭಾರತದ ರೈತರು ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ಎಂದು ಹೇಳಿದವರು

 ಚಾರ್ಲ್ಸ್ ಮೆಟಕಾಫ್ (TET-2020)


 ಮಹಲ್ ಪದದ ಅರ್ಥವೇನು ?

 ತಾಲೂಕು


 ಮಹಲ್ವಾರಿ ಪದ್ದತಿಯನ್ನು ಪ್ರಯೋಗಿಸಿದವರು

  ಆರ್ . ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್


 ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು

  ಅಲೆಕ್ಸಾಂಡರ್ ರೀಡ್ ( 1782 )(TET-2020)


 ರೈತವಾರಿ ಪದ್ಧತಿಯನ್ನು ಮದರಾಸು , ಮೈಸೂರು ( 1801 ) ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು

  ಥಾಮಸ್ ಮನ್ರೋ


 ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ

  ರೈತವಾರಿ


 ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಭೂ ಕಂದಾಯ ಪದ್ದತಿಯಿಂದ

  ರೈತವಾರಿ


 ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಆಧಿಕಾರಿ

  ವಾರನ್ ಹೇಸ್ಟಿಂಗ್ಸ್


 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು

 ವಾರನ್ ಹೇಸ್ಟಿಂಗ್


 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು

  ಜೊನಾಥನ್ ಡಂಕನ್


 ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು

  ಚಾರ್ಲ್ಸ್ ಗ್ರಾಂಟ್


 ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್

 ವಿಲಿಯಂ ಬೆಂಟಿಂಕ್


  ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು

  ಮೆಕಾಲೆ


 ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ , ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶ ಹೊಂದಿದ ವರದಿ

- ಮೆಕಾಲೆ


 1857 ರಲ್ಲಿ ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು

 ಡಾಲ್ ಹೌಸಿ


 ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ

  1935 ರ ಭಾರತ ಸರರ್ಕಾದ ಕಾಯ್ದೆ


 ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ

  1935 ರ ಭಾರತ ಸರ್ಕಾರ ಕಾಯ್ದೆ


 ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು , ಏಕೆ.?

  ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು , ಬ್ರಿಟಷರಲ್ಲಿ ನಡುಕ ಹುಟ್ಟಿಸಿತು , ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು


 ಮೊದಲನೆ ಆಂಗ್ಲೋ - ಮೈಸೂರು ಯುದ್ದ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

 ಮದ್ರಾಸ್ ಒಪ್ಪಂದ

 

 ಪೊರ್ಟೋನೋವೆ ಕದನದಲ್ಲಿ ( 1781 ) ಸೋತವರು

  ಹೈದರಾಲಿ


  2ನೇ ಆಂಗ್ಲೋ - ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ

 ಮಂಗಳೂರು


 ಮೂರನೇ ಆಂಗ್ಲೋ - ಮೈಸೂರು ಯುದ್ದಕೆ ಕಾರಣ

  ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ


 ಮೂರನೇ ಆಂಗ್ಲೋ - ಮೈಸೂರು ಯುದ್ಧದ ಗತಿ ಬದಲಾಗಲು ಕಾರಣ

  ಲಾರ್ಡ್ ಕಾರನ್‌ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು


 ಮೂರನೇ ಆಂಗ್ಲೋ- ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ

  ಶ್ರೀರಂಗಪಟ್ಟಣ ಒಪ್ಪಂದ (civil PC-2020)


 ಮರಾಠಿಯಲ್ಲಿ ವಾಘ ಎಂದರೆ

 ಹುಲಿ


 ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣ

  ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು


 ದೋಂಡಿಯಾನಿಗೆ ಸಹಾಯ ಮಾಡಿದವರು

  ಫ್ರೆಂಚ್‌ರು


 ದೋಂಡಿಯಾನು ಹತ್ಯೆಯಾದ ಸ್ಥಳ

 ಕೋನ್ ಗಲ್


 ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣ

  ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು


  ಚೆನ್ನಮ್ಮ ಮರಣ ಹೊಂದಿದ ಸ್ಥಳ

  ಬೈಲಹೊಂಗಲ


 ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ

 ನಂದಗಡ ( 1831 )


 ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ

 ರೈತ ಬಂಡಾಯ


  1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು

  ವೆಂಕಟಪ್ಪನಾಯಕ


 ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ

  ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು


 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣ

 ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು


 ಆತ್ಮೀಯ ಸಭಾ ( ಕಲ್ಕತ್ತಾ)ದ ಸ್ಥಾಪಕರು

  ರಾಜಾ ರಾಮ್ ಮೋಹನ್ ರಾಯ್


  ಭಾರತದ ಪುನರುಜ್ಜಿವನದ ಜನಕ , ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು

  ರಾಜಾ ರಾಮ್ ಮೋಹನ್ ರಾಯ್


 ಯುವಬಂಗಾಳ ಚಳವಳಿ ಆರಂಭಿಸಿದವರು

 ಹೆನ್ರಿ ವಿವಿಯನ್ ಡಿರೇಜಿಯೊ (TET-2020)


 ಅಕಾಡಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆ ಸ್ಥಾಪಕರು

 ಹೆನ್ರಿ ವಿವಿಯನ್ ಡಿರೇಜಿಯೊ

No comments: