ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ
( International Mother Language Day )=================
ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಫೆ . 21 ನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ . 1999 ರಲ್ಲಿ ಯುನೆಸ್ಕೋ ಇದನ್ನು ಘೋಷಿಸಿತು . ಇದರ ಮುಂದುವರಿದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು
"ವಿಶ್ವ ಭಾಷೆಗಳ ವರ್ಷ" ಎಂದು ಆಚರಿಸಿತು . 2000 ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷಾ ದಿವಸವನ್ನು ಆಚರಿಸಲಾಗುತ್ತಿದೆ . 1952 ರಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಭಾಷಾ ) ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು . 1952 ರ ಫೆ .21 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ತೀವ ಸ್ವರೂಪ ಪಡೆಯಿತು . ಪೊಲೀಸ್ ಗೋಲಿಬಾರಿನಲ್ಲಿ ಕೆಲವು ವಿದ್ಯಾರ್ಥಿಗಳು ಅಸುನೀಗಿದರು . ಆ ನೆನಪಿಗಾಗಿ ವಿಶ್ವ ಮಾತೃಭಾಷಾ ದಿನ ಆಚರಣೆ ರೂಢಿಗೆ ಬಂತು .
==================
☘ ಅಪಾಯದಲ್ಲಿವೆ ಭಾಷೆಗಳು
=====================
ಭಾರತದಲ್ಲಿ 19,500 ಕ್ಕೂ ಹೆಚ್ಚು ಆಡುಭಾಷೆಗಳಿವೆ ಇವೆಲ್ಲವನ್ನು ತಾಯ್ನುಡಿ ಎಂದು ಪರಿಗಣಿಸಬಹುದಾಗಿದೆ ಎಂದು ಇತ್ತೀಚಿನ ಜನಗಣತಿ ಆಧರಿಸಿ ರೂಪಿಸಲಾದ ವರದಿ ತಿಳಿಸಿದೆ . 2011 ರ ಜನಗಣತಿ ವರದಿ ಪ್ರಕಾರ , 19,569 ಕ್ಕೂ ಅಧಿಕ ಮಾತೃಭಾಷೆಗಳಿವೆ . ಆದರೆ ಶೇ . 96.71 ರಷ್ಟು ಜನಸಂಖ್ಯೆ 22 ಅಧಿಸೂಚಿತ ಭಾಷೆಗಳನ್ನೇ ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಾರೆ . ಒಟ್ಟಾರೆ 270 ಕ್ಕೂ ಅಧಿಕ ಗುರುತು ಸಿಗದ ತಾಯ್ನುಡಿಗಳಿದ್ದು 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುತ್ತಿದ್ದಾರೆ .
ಆಸ್ಸಾಮಿ , ಬಂಗಾಲಿ , ಗುಜರಾತಿ , ಹಿಂದಿ , ಕನ್ನಡ ಕಾಶ್ಮೀರಿ , ಕೊಂಕಣಿ , ಮಲಯಾಳ , ಮಣಿಪುರಿ , ಮರಾಠಿ , ನೇಪಾಲಿ , ಒರಿಯಾ , ಪಂಜಾಬಿ , ಸಂಸ್ಕೃತ , ಸಿಂಧಿ , ತಮಿಳು , ತೆಲುಗು , ಉರ್ದು , ಬೋಡೋ , ಸಂಥಲಿ , ಮೈಥಿಲಿ ಹಾಗೂ ಡೊಗ್ರಿ ಭಾಷೆಗಳು ಮಾತ್ರ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದ 22 ಭಾಷೆಗಳಾಗಿವೆ .
============
☘ ಈ ವರ್ಷದ ಶೀರ್ಷಿಕೆ
===================
"Fostering multilingualism for inclusion in education and society"
ಅಂದರೆ , ಸೇರ್ಪಡೆಗಾಗಿ ಶಿಕ್ಷಣ ಮತ್ತು ಸಮಾಜದಲ್ಲಿ ಬಹುಭಾಷಿಕತೆಯನ್ನು ಬೆಳೆಸುವುದು' ಇದರರ್ಥ , ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವುದು .
==========
:point_right: Note
===========
:large_blue_diamond: RBI to evaluate impact of ‘RBI Kehta Hai’ campaign in 14 languages
:large_orange_diamond:Government Formed committee to protect language, culture & land of Ladakh headed by G Kishan Reddy
:large_blue_diamond:Assam Cabinet approves Bill to make ‘Bodo’ as Associate Official Language of the State
:large_orange_diamond: Film editor Shreekar Prasad has entered Limca Book of Records
for editing films in 17 languages.
:large_blue_diamond:Cabinet Approves Bill To Include Kashmiri, Dogri, Hindi As Official Languages In J&K
=================
🏛 United Nations Educational Scientific And Cultural Organisation (UNESCO)
:small_blue_diamond:Founded - 4 Nov 1946
:small_blue_diamond:HQ - Paris France
:small_blue_diamond:DG - Audrey Azouley
:small_blue_diamond:MC -193
No comments:
Post a Comment