Search This Blog

Sunday, March 14, 2021

FDI IN INDIA

 ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ಭಾರತಕ್ಕೆ 9 ನೇ ಸ್ಥಾನ


ನವದೆಹಲಿ: ಕೊರೊನ್ ವೈರಸ್ ಜಾಗತಿಕವಾಗಿ ವ್ಯಾಪಿಸುತ್ತಿರುವ ಭೀತಿಯ ಸಮಯದಲ್ಲೂ ವಿದೇಶಿ ನೇರ ಹೂಡಿಕೆ ಆಕರ್ಷಿಸುವುದನ್ನು ಭಾರತ ಮುಂದುವರೆಸಲಿದೆ ಎಂದು ವಿಶ್ವಸಂಸ್ಥೆಯ ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಕಾನ್ಫರೆನ್ಸ್ (UN Conference on Trade and Development) ತಿಳಿಸಿದೆ.

* 2018-19 ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು ಪಡೆದ 9 ನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಭಾರತ 51 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಪಡೆದಿದೆ ಎಂದು ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಕಾನ್ಫರೆನ್ಸ್ ವರದಿ ಹೇಳಿದೆ.

* ಭಾರತವು 2008 ರಲ್ಲಿ ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ 12 ನೇ ಸ್ಥಾನದಲ್ಲಿತ್ತು. ಈಗ ಏಷ್ಯಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವು ಬೆಳೆಯುತ್ತಿದೆ.

* ಒಟ್ಟಾರೆಯಾಗಿ 2005 ರ ನಂತರ ಮೊದಲ ಬಾರಿಗೆ ಜಾಗತಿಕ ವಿದೇಶಿ ನೇರ ಹೂಡಿಕೆ 1 ಟ್ರಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ ವಿದೇಶಿ ನೇರ ಹೂಡಿಕೆ 2020 ರಲ್ಲಿ ಶೇಕಡಾ 45 ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.

No comments: