Search This Blog

Sunday, March 14, 2021

AGRICULTER

 ‘ಕೃಷಿ ಮೂಲಸೌಕರ್ಯ ನಿಧಿ’ ಕೇಂದ್ರ ಸಚಿವ ಸಂಪುಟ ಅನುಮೋದನೆ


ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಪ್ಯಾನ್ ಇಂಡಿಯಾ ಕೇಂದ್ರ ವಲಯ ಯೋಜನೆಗೆ ಅನುಮೋದನೆ ನೀಡಲಾಯಿತು. ಈ ಹೊಸ ಕೇಂದ್ರ ವಲಯ ಯೋಜನೆಯನ್ನು ‘ಕೃಷಿ ಮೂಲಸೌಕರ್ಯ ನಿಧಿ’ (Agriculture Infrastructure Fund) ಎಂದು ಕರೆಯಲಾಗುತ್ತದೆ.

20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭಾರ ಭಾರತ್ ಯೋಜನೆಯ ಭಾಗವಾಗಿ ‘ಕೃಷಿ ಮೂಲಸೌಕರ್ಯ ನಿಧಿ’ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಈ ಯೋಜನೆಯಡಿ ಕೃಷಿ ವಲಯಕ್ಕೆ ರೈತ ಉತ್ಪಾದಕ ಸಂಸ್ಥೆಗಳು (FPO), ಸ್ಟಾರ್ಟ್ಅಪ್, ಪ್ರಾಥಮಿಕ ಕೃಷಿ ಸಾಲ ಸಂಘಗಳು, ಕೃಷಿ ಉದ್ಯಮಿಗಳಿಗೆ ದೇಶದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ 1 ಲಕ್ಷ ಕೋಟಿ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುವುದು.

ಕೃಷಿ ಮೂಲಸೌಕರ್ಯ ನಿಧಿ :
* ಈ ಯೋಜನೆಯ ಅವಧಿ 10 ವರ್ಷಗಳವರೆಗೆ ಅಂದರೆ 2020-21ರ ಆರ್ಥಿಕ ವರ್ಷದಿಂದ 2029-30 ರವರೆಗೆ.
* ಈ ಯೋಜನೆಯಡಿ 1 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗುವುದು ಮತ್ತು ಅದರಲ್ಲಿ 2020-21ರ ಆರ್ಥಿಕ ವರ್ಷದಲ್ಲಿ 10,000 ಕೋಟಿ ರೂ. ಆದರೆ ಮುಂದಿನ ಮೂರು ಹಣಕಾಸು ವರ್ಷದಲ್ಲಿ 30,000 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು.

No comments: