DHFWS Recruitment 2025: ಎಂಬಿಬಿಎಸ್ ಡಾಕ್ಟರ್, ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಸಂಬಳ ಎಷ್ಟು? ಅರ್ಹತಾ ಮಾನದಂಡಗಳು ಏನು
DHFWS Recruitment 2025: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಚಿಕ್ಕಬಳ್ಳಾಪುರ ಇದೀಗ ಎಂಬಿಬಿಎಸ್ ಡಾಕ್ಟರ್, ಸ್ಟಾಫ್ ನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ನೀವು ಚಿಕ್ಕಬಳ್ಳಾಪುರದವರಾಗಿದ್ದರೆ ಅಥವಾ ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡಲು ಇಚ್ಚಿಸಿದ್ರೆ ಈ ಅವಕಾಶ ಬಳಕೆ ಮಾಡಿಕೊಳ್ಳಬಹುದು.
ಚಿಕ್ಕಬಳ್ಳಾಪುರ ಹುದ್ದೆಯ ಅಧಿಸೂಚನೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿಕ್ಕಬಳ್ಳಾಪುರ ( DHFWS) ಇದೀಗ ಒಟ್ಟಾರೆ 60 ಹದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಉದ್ದೆಯಾನುಸಾರ ತಿಂಗಳಿಗೆ ರೂ.14,044-1,10,000 ಪಡೆಯಬಹುದಾಗಿದೆ.
ಹುದ್ದೆಯ ವಿವರಗಳು
ಓಬಿಜಿ- 4
ಮಕ್ಕಳ ತಜ್ಞ-3
ಅರಿವಳಿಕೆ-1
ವೈದ್ಯ/ಸಮಾಲೋಚಕ ಔಷಧ-4
ನೇತ್ರತಜ್ಞ-1
ಎಂಬಿಬಿಎಸ್ ಡಾಕ್ಟರ್-22
ಜಿಲ್ಲಾ ಆಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕರು-1
ಜಿಲ್ಲಾ ಸಂಯೋಜಕ ಎ.ಎ.ಎಂ-1
ಪಿಹೆಚ್‌ಸಿಓ -3
ಸ್ಟಾಫ್ ನರ್ಸ್-19
ಮನೋವೈದ್ಯ-1
ವಿದ್ಯಾರ್ಹತಾ ವಿವರಗಳು
ಪೋಸ್ಟ್ ಹೆಸರು ಹಾಗೂ ಅರ್ಹತೆ
ಓಬಿಜಿ - ಡಿಜಿಓ, ಡಿಎನ್‌ಬಿ, ಎಂಡಿ .
ಮಕ್ಕಳ ತಜ್ಞ- ಎಂಬಿಬಿಎಸ್, ಎಂಡಿ, ಡಿಎನ್‌ಬಿ, ಡಿ ಸಿಹೆಚ್.
ಅರಿವಳಿಕೆ- ಎಂಡಿ, ಡಿಎ, ಡಿಎನ್‌ಬಿ.
ವೈದ್ಯ/ಸಮಾಲೋಚಕ ಔಷಧ- ಎಂಬಿಬಿಎಸ್.
ನೇತ್ರತಜ್ಞ- ಎಂಡಿ, ಎಂಎಸ್ , ಸ್ನಾತಕೋತ್ತರ ಪದವಿ.
ಎಂಬಿಬಿಎಸ್ ಡಾಕ್ಟರ್- ಎಂಬಿಬಿಎಸ್.
ಜಿಲ್ಲಾ ಆಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕರು-ಎಂಬಿಬಿಎಸ್, ಬಿಪಿಹೆಚ್, ಸ್ನಾತಕೋತ್ತರ ಪದವಿ, ಎಂಪಿಹೆಚ್.
ಜಿಲ್ಲಾ ಸಂಯೋಜಕ ಎ.ಎ.ಎಂ - ಬಿಡಿಎಸ್, ಬಿಎಸ್‌ಸಿ, ಬಿಎಎಂಎಸ್, ಬಿಹೆಚ್‌ಎಂಎಸ್, ಬಿಯುಎಂಎಸ್, ಎಂಎಸ್‌ಸಿ.
ಪಿಹೆಚ್‌ಸಿಓ- 10 ನೇ, ಎಎನ್‌ಎಂ
ಸ್ಟಾಫ್ ನರ್ಸ್- ಜಿಎನ್‌ಎಂ
ಮನೋವೈದ್ಯ- ಎಂಬಿಬಿಎಸ್, ಎಂಡಿ, ಡಿಎನ್‌ಬಿ, ಡಿಪಿಎಂ.
ವಯೋಮಿತಿ ಸಡಿಲಿಕೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಚಿಕ್ಕಬಳ್ಳಾಪುರ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಲ್ಲದೆ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವ ಹಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳದ ವಿವರಗಳು
ಓಬಿಜಿ- ರೂ.1,10,000/-
ಮಕ್ಕಳ ತಜ್ಞ -ರೂ.1,10,000/-
ಅರಿವಳಿಕೆ -ರೂ.1,10,000/-
ವೈದ್ಯ/ಸಮಾಲೋಚಕ ಔಷಧ -ರೂ.1,10,000/-
ನೇತ್ರತಜ್ಞ - ರೂ.1,10,000/-
ಎಂಬಿಬಿಎಸ್ ಡಾಕ್ಟರ್- ರೂ.60000/-
ಜಿಲ್ಲಾ ಆಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕರು- ರೂ.35,000/-
ಜಿಲ್ಲಾ ಸಂಯೋಜಕ ಎ.ಎ.ಎಂ- ರೂ.30,000/-
ಪಿಹೆಚ್‌ಸಿಓ- ರೂ. 14,044/-
ಸ್ಟಾಫ್ ನರ್ಸ್- ರೂ.15,554/-
ಮನೋವೈದ್ಯ- ರೂ.1,10,000/-
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03 ಜನವರಿ 2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಜನವರಿ 2025
ದಾಖಲೆಗಳ ಪರಿಶೀಲನೆಯ ದಿನಾಂಕ: 16 ಮತ್ತು 17ನೇ ಜನವರಿ 2025
ಅರ್ಜಿ ಸಲ್ಲಿಕೆ ಮಾಡಲು ಹಾಗೂ ಇತರೆ ಯಾವುದೇ ಮಾಹಿತಿಗೆ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
No comments:
Post a Comment