Search This Blog

Wednesday, January 1, 2025

ksrtc ಬಂದ ಪ್ರಶಸ್ತಿಗಳು

ಕೆಎಸ್‌ಆರ್‌ಟಿಸಿಗೆ ಯಾವೆಲ್ಲಾ ಪ್ರಶಸ್ತಿ ಬಂದಿದೆ ?

ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಪರಿಚಯ- ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ

ಅಂಬಾರಿ ಉತ್ಸವ ಬಸ್ ಅತ್ಯುತ್ತಮ ಬ್ರಾಂಡ್ ಅನುಭವ.

ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ

ಪಲ್ಲಕ್ಕಿ ಬಸ್ಸುಗಳ -ಅತ್ಯುತ್ತಮ ಗ್ರಾಹಕ ಸ್ವೀಕೃತಿ

ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್- ಅತ್ಯುತ್ತಮ ಸಾರ್ವಜನಿಕ ಸಂಪರ್ಕ

ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ವರ್ಷದ ಅತ್ಯುತ್ತಮ ಬ್ರ್ಯಾಂಡ್

ಗ್ರೋ ಕೇರ್ ಇಂಡಿಯಾ ವತಿಯಿಂದ ಕೊಡಮಾಡಲಾಗುವ ಪ್ರಶಸ್ತಿ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿ ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ ಎರಡು ವಿಭಾಗದಲ್ಲಿ ಪಡೆದಿರುತ್ತದೆ. ಇದರ ಜೊತೆಗೆ, PRSI ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ಪಡೆದುಕೊಂಡಿದೆ. ನಿಗಮಕ್ಕೆ AdWorld ಪ್ರಶಸ್ತಿಗಳನ್ನು ನವದೆಹಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿ.ಆರ್.ಎಸ್.ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು.

ಇದರೊಂದಿಗೆ ಕೆಎಸ್‌ಆರ್‌ಟಿಸಿಗೆ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ಗೋಲ್ಡನ್ ಸ್ಟಾರ್ ಪ್ರಶಸ್ತಿ-2024ಯೂ ಬಂದಿದೆ. ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ನಿಗಮದ ಪ್ರತಿಷ್ಠಿತ ಬ್ಯ್ರಾಂಡಿಂಗ್ ಉಪಕ್ರಮಗಳಿಗಾಗಿ ಗೋಲ್ಡನ್ ಸ್ಟಾರ್ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊಫೆಸರ್ ಡಾ. ರಾಮಪ್ರಸಾದ್ ಬ್ಯಾನರ್ಜಿಯವರು, EIILM, ಕೊಲ್ಕತ್ತ, ಶ್ರೀ. ಸಂಜಯ್ ರಾಮದಾಸ್ ಕಾಮತ್, ಹಿರಿಯ ಉಪಾಧ್ಯಕ್ಷರು ಮತ್ತು ಬಿಸಿನೆಸ್ ಮುಖ್ಯಸ್ಥರು, SASIA ರವರು, ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...