ಕ್ರೀಡೆಯಲ್ಲಿನ ಶ್ರೇಷ್ಠ ಸಾಧನೆ ಗುರುತಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದೇ ವೇಳೆ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ 32 ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಶಿಸ್ತು, ಕ್ರೀಡಾಸ್ಫೂರ್ತಿ ಹಾಗೂ ಉತ್ತಮ ನಾಯಕತ್ವ ಗುಣ ತೋರಿದ ಕ್ರೀಡಾಪಟುಗಳಿಗೆ ನೀಡುವ ಅರ್ಜುನ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಜನವರಿ 17ರಂದು ಪ್ರಶಸ್ತಿ ಪ್ರಧಾನ:
2025ರ ಜನವರಿ 17 ರಂದು (ಶುಕ್ರವಾರ) ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು ಭಾರತದ ರಾಷ್ಟ್ರಪತಿಗಳಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ ಎಂದು ಕ್ರೀಡಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು, ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯರಾದರು.
2024ರ ವರ್ಷಕ್ಕೆ 4 ಆಟಗಾರರು ಪ್ರಶಸ್ತಿ ಪ್ರಧಾನ:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಮತ್ತು ಚೆಸ್ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ಈ ವರ್ಷ ನೀಡಲಾಗುತ್ತಿದೆ.
ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಆಟಗಾರರು:
ಇದಲ್ಲದೇ ಅರ್ಜುನ ಪ್ರಶಸ್ತಿಗೆ 32 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 17 ಮಂದಿ ಪ್ಯಾರಾ ಅಥ್ಲೀಟ್ ಗಳಾಗಿದ್ದಾರೆ.
1) ಜ್ಯೋತಿ ಯರಾಜಿ (ಅಥ್ಲೆಟಿಕ್ಸ್)
2) ಅಣ್ಣು ರಾಣಿ (ಅಥ್ಲೆಟಿಕ್ಸ್)
3) ನೀತು (ಬಾಕ್ಸಿಂಗ್)
4) ಸ್ವೀಟಿ (ಬಾಕ್ಸಿಂಗ್)
5) ವಂತಿಕಾ ಅಗರ್ವಾಲ್ (ಚೆಸ್)
6) ಸಲೀಮಾ ಟೆಟೆ (ಹಾಕಿ)
7) ಅಭಿಷೇಕ್ (ಹಾಕಿ)
8) ಸಂಜಯ್ (ಹಾಕಿ)
9) ಜರ್ಮನ್‌ಪ್ರೀತ್ ಸಿಂಗ್ (ಹಾಕಿ)
10) ಸುಖಜಿತ್ ಸಿಂಗ್ (ಹಾಕಿ)
11) ರಾಕೇಶ್ ಕುಮಾರ್ (ಪ್ಯಾರಾ-ಆರ್ಚರಿ)
12) ಪ್ರೀತಿ ಪಾಲ್ (ಪ್ಯಾರಾ ಅಥ್ಲೆಟಿಕ್ಸ್)
13) ಜೀವನಜಿ ದೀಪ್ತಿ (ಪ್ಯಾರಾ ಅಥ್ಲೆಟಿಕ್ಸ್)
14) ಅಜಿತ್ ಸಿಂಗ್ (ಪ್ಯಾರಾ ಅಥ್ಲೆಟಿಕ್ಸ್)
15) ಸಚಿನ್ ಸರ್ಜೆರಾವ್ ಖಿಲಾರಿ (ಪ್ಯಾರಾ ಅಥ್ಲೆಟಿಕ್ಸ್)
16) ಧರಂಬೀರ್ (ಪ್ಯಾರಾ ಅಥ್ಲೆಟಿಕ್ಸ್)
17) ಪ್ರಣವ್ ಸುರ್ಮಾ (ಪ್ಯಾರಾ ಅಥ್ಲೆಟಿಕ್ಸ್)
18) ಎಚ್ ಹೊಕಾಟೊ ಸೆಮಾ (ಪ್ಯಾರಾ ಅಥ್ಲೆಟಿಕ್ಸ್)
19) ಸಿಮ್ರಾನ್ ಜಿ (ಪ್ಯಾರಾ ಅಥ್ಲೆಟಿಕ್ಸ್)
20) ನವದೀಪ್ (ಪ್ಯಾರಾ ಅಥ್ಲೆಟಿಕ್ಸ್)
21) ನಿತೇಶ್ ಕುಮಾರ್ (ಪ್ಯಾರಾ-ಬ್ಯಾಡ್ಮಿಂಟನ್)
22) ತುಳಸಿಮತಿ ಮುರುಗೇಶನ್ (ಪ್ಯಾರಾ ಬ್ಯಾಡ್ಮಿಂಟನ್)
23) ನಿತ್ಯ ಶ್ರೀ ಸುಮತಿ ಶಿವನ್ (ಪ್ಯಾರಾ-ಬ್ಯಾಡ್ಮಿಂಟನ್)
24) ಮನೀಶಾ ರಾಮದಾಸ್ (ಪ್ಯಾರಾ-ಬ್ಯಾಡ್ಮಿಂಟನ್)
25) ಕಪಿಲ್ ಪರ್ಮಾರ್ (ಪ್ಯಾರಾ ಜೂಡೋ)
26) ಮೋನಾ ಅಗರ್ವಾಲ್ (ಪ್ಯಾರಾ-ಶೂಟಿಂಗ್)
27) ರುಬಿನಾ ಫ್ರಾನ್ಸಿಸ್ (ಪ್ಯಾರಾ-ಶೂಟಿಂಗ್)
28) ಸ್ವಪ್ನಿಲ್ ಸುರೇಶ್ ಕುಸಲೆ (ಶೂಟಿಂಗ್)
29) ಸರಬ್ಜೋತ್ ಸಿಂಗ್ (ಶೂಟಿಂಗ್)
30) ಅಭಯ್ ಸಿಂಗ್ (ಸ್ಕ್ವಾಷ್)
31) ಸಜನ್ ಪ್ರಕಾಶ್ (ಈಜು)
32) ಅಮನ್ (ಕುಸ್ತಿ)
ದ್ರೋಣಾಚಾರ್ಯ ಪ್ರಶಸ್ತಿ
1) ಸುಭಾಷ್ ರಾಣಾ -ಪ್ಯಾರಾ-ಶೂಟಿಂಗ್ -ಕೋಚ್
2) ದೀಪಾಲಿ ದೇಶಪಾಂಡೆ-ಶೂಟಿಂಗ್- ಕೋಚ್
3) ಸಂದೀಪ್ ಸಾಂಗ್ವಾನ್- ಹಾಕಿ- ಕೋಚ್
4) ಎಸ್ ಮುರಳೀಧರನ್- ಬ್ಯಾಡ್ಮಿಂಟನ್- ಜೀವಮಾನ ಸಾಧನೆ
5) ಅರ್ಮಾಂಡೋ ಆಗ್ನೆಲೊ ಕೊಲಾಕೊ-ಫುಟ್ಬಾಲ್ -ಜೀವಮಾನ ಸಾಧನೆ
ಅರ್ಜುನ ಪ್ರಶಸ್ತಿ- ಜೀವಮಾನ ಸಾಧನೆ
1) ಸುಚಾ ಸಿಂಗ್- ಅಥ್ಲೀಟ್ಸ್
2) ಮುರುಳಿಕಾಂತ್ ರಾಜಾರಾಂ ಪೇಟ್ಕರ್- ಪ್ಯಾರಾ ಸ್ವಿಮ್ಮಿಂಗ್
ಪ್ರಶಸ್ತಿ ವಿಜೇತರಿಗೆ ಸಿಗುವ ಹಣವೆಷ್ಟು?
ಇನ್ನು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಕ್ರೀಡಾ ಗೌರವ ಆಗಿದೆ. ಈ ಪಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಜೊತೆಗೆ 25 ಲಕ್ಷ ರೂ ಸಿಗಲಿದೆ. ಅದರಂತೆ ಅರ್ಜುನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳು ತಲಾ 15 ಲಕ್ಷ ಪಡೆಯಲಿದ್ದಾರೆ. ಇನ್ನು ಅರ್ಜುನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳು ತಲಾ 15 ಲಕ್ಷ ಪಡೆಯುತ್ತಾರೆ. ಇನ್ನು ದ್ರೋಣಾಚಾರ್ಯ ಪ್ರಶಸ್ತಿ ಪಡೆಯುವ ಹಾಲಿ ಕೋಚ್‌ಗಳಿಗೆ 10 ಲಕ್ಷ ಹಾಗೂ ಜೀವಮಾನ ಸಾಧನೆಗೆ ಪಡೆಯುವವರಿಗೆ 15 ಲಕ್ಷ ರೂ ನೀಡಲಾಗುತ್ತದೆ.
No comments:
Post a Comment