ಅದರಲ್ಲೂ 50 ರಿಂದ 75 ವರ್ಷದ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳನ್ನ ನೀಡುತ್ತಿವೆ.
ಸ್ಥಿರ ಠೇವಣಿಗಳು ಹಲವಾರು ಕಾರಣಗಳಿಗಾಗಿ ಪ್ರಮುಖ ಹಣಕಾಸು ಸಾಧನವಾಗಿದೆ. ವಿಶೇಷವಾಗಿ ಸ್ಥಿರ, ಕಡಿಮೆ-ಅಪಾಯದ ಹೂಡಿಕೆ ಆಯ್ಕೆಗಳನ್ನು ಬಯಸುವ ವ್ಯಕ್ತಿಗಳಿಗೆ. ನಿಶ್ಚಿತ ಠೇವಣಿಗಳು ಏಕೆ ಮುಖ್ಯವಾದುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.
ನಿಶ್ಚಿತ ಠೇವಣಿಗಳನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು ಖಾತರಿಯ ಆದಾಯವನ್ನು ನೀಡುತ್ತವೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ಪ್ರಮುಖ ಮೊತ್ತವು ಸುರಕ್ಷಿತವಾಗಿದೆ ಮತ್ತು ಷೇರುಗಳು ಅಥವಾ ಮ್ಯೂಚುಯಲ್ ಫಂಡ್‌ಗಳಂತೆ ಮಾರುಕಟ್ಟೆಯ ಚಂಚಲತೆಯಿಂದ ಪ್ರಭಾವಿತವಾಗುವುದಿಲ್ಲ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಧಿಕಾರಿಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನಿರ್ದಿಷ್ಟ ಮಿತಿಯವರೆಗಿನ ಠೇವಣಿಗಳನ್ನು ವಿಮೆ ಮಾಡಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹೊಸ FD ದರ: SBI vs ಪೋಸ್ಟ್ ಆಫೀಸ್.. ಎಲ್ಲಿ ಹೂಡಿಕೆ ಮಾಡಬೇಕು?
ಸ್ಥಿರ ಹೂಡಿಕೆಗಳ ಮೇಲಿನ ಹೆಚ್ಚಿನ ಬಡ್ಡಿದರವನ್ನ ಪಡೆಯುವುದರಿಮದ ಇದು ಸಾಕಷ್ಟು ಲಾಭದಾಯಕವಾಗಿದೆ. ಏಕೆ ಎನ್ನುವುದನ್ನು ಇಲ್ಲಿ ತಿಳಿಯಿರಿ. ಬ್ಯಾಂಕ್ ಎ ಒಂದು ವರ್ಷದ FD ಮೇಲೆ ನಿಮಗೆ 6% ಬಡ್ಡಿದರ ನೀಡುತ್ತಿದೆ. ಹಾಗೆ ಬ್ಯಾಂಕ್ ಬಿ, ಸಣ್ಣ ಬ್ಯಾಂಕ್ 7.5% ನೀಡುತ್ತದೆ. ನೀವು ಬ್ಯಾಂಕ್ B ಯಲ್ಲಿ 10 ಲಕ್ಷ ರೂ. ಠೇವಣಿ ಮಾಡಿದರೆ ಅದರಲ್ಲಿ ನೀವು 75,000 ರೂ. ಹೆಚ್ಚು ಗಳಿಸುತ್ತೀರಿ. ಬ್ಯಾಂಕ್ ಎಯಲ್ಲಿ ನೀವು ಅಷ್ಟೇ ಮೊತ್ತವನ್ನ ಠೇವಣಿ ಮಾಡಿದ್ರೆ 60,000 ರೂ ಹೆಚ್ಚು ಗಳಿಸುತ್ತೀರಿ. ಅಂದರೆ ಈ ಎರಡರಲ್ಲಿ 15,000 ವ್ಯತ್ಯಾಸವನ್ನ ನೀವು ಕಾಣಬಹುದು. ಇದರಲ್ಲಿ ಯಾವುದು ಲಾಭ ಎನ್ನುವುದನ್ನು ನಿಮಗೆ ತಿಳಿಯುತ್ತದೆ.
FD ದರಗಳು: ಈ 6 ಬ್ಯಾಂಕ್‌ಗಳು ನಿಮಗೆ ದೀರ್ಘಾವಧಿಯ FDಯ ಮೇಲೆ ಹೆಚ್ಚಿನ ದರವನ್ನ ನೀಡುತ್ತವೆ!
ಇದರಲ್ಲಿ ಕೆಲವು ಅಪಾಯಗಳು ಕೂಡ ಒಳಗೊಂಡಿವೆ
ನಿಮ್ಮ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಆದಾಯವನ್ನ ನೀಡುತ್ತಿವೆ ಎಂದರೆ ಅದು ಕೆಲವು ಅಪಾಯಗಳನ್ನ ಕೂಡ ಒಳಗೊಂಡಿರುತ್ತದೆ. ಅಲ್ಲದೆ ಈ ಸಣ್ಣ ಬ್ಯಾಂಕ್‌ಗಳು ಕೆಲವೊಮ್ಮೆ ಸ್ಥಿರವಾಗಿಲ್ಲದೆ ಇರಬಹುದು. ಇದರ ಬಗ್ಗೆ ಇಲ್ಲಿ ತಿಳಿಯಿರಿ.
1. ಬ್ಯಾಂಕ್ ಸ್ಥಿರತೆ: ಈ ಸಣ್ಣ ಬ್ಯಾಂಕ್‌ಗಳು ಆರ್ಥಿಕವಾಗಿ ಸದೃಢವಾಗಿದೆಯಾ ಎನ್ನುವುದನ್ನು ನೀವು ತಿಳಿಯಲು ಆ ಬ್ಯಾಂಕ್‌ನ ಕ್ರೆಡಿಟ್ ರೆಟಿಂಗ್‌ಗಳನ್ನು ಪರಿಶೀಲನೆ ಮಾಡಬೇಕು. ಅಲ್ಲದೆ ಅದೇನಾದ್ರು ಕಡಿಮೆ ರೇಟಿಂಗ್ ಹೊಂದಿದ್ದರೆ ಅತೀ ಹೆಚ್ಚು ಅಪಾಯವನ್ನ ಅದು ಹೊಂದಿರುತ್ತದೆ ಎನ್ನುವುದನ್ನು ನೀವು ಅರಿತಿರಬೇಕು.
2. ಠೇವಣಿ ವಿಮೆ: ನಿಮ್ಮ ಠೇವಣಿ 5 ಲಕ್ಷಕ್ಕಿಂತ ಹೆಚ್ಚಿದ್ದರೆ, ಹೆಚ್ಚುವರಿ ಮೊತ್ತವನ್ನ ವಿಮೆ ಮಾಡಲು ಆಗುವುದಿಲ್ಲ. ನಿಮ್ಮ ಠೇವಣಿ 5 ಲಕ್ಷ ಇದ್ದರೆ ಡಿಐಸಿಜಿಸಿ ವಿಮೆ ಮಾಡುತ್ತದೆ. ಇದು ಅಸಲು ಮತ್ತು ಬಡ್ಡಿ ಎರಡನ್ನೂ ಕೂಡ ಒಳಗೊಂಡಿರುತ್ತದೆ.
3. ಲಿಕ್ವಿಡಿಟಿ: ಸಣ್ಣ ಬ್ಯಾಂಕ್‌ಗಳಲ್ಲಿ ಲಿಕ್ವಿಡಿಟಿ ಸಮಸ್ಯೆ ಇರಬಹುದು. ಇದು ಅವರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನಿಮ್ಮ ಠೇವಣಿಗಳ ಮೇಲು ಕೂಡ ಇದು ಪರಿಣಾಮ ಬೀರಬಹುದು.
ಈ ಬ್ಯಾಂಕ್‌ನಲ್ಲಿ FD ಇಡಿ; 8.10% ಆದಾಯ ಖಚಿತ.. ಲಾಸ್ಟ್ ಡೇಟ್ ಯಾವುದು?
ಬ್ಯಾಂಕ್‌ಗಳನ್ನು ಆಯ್ಕೆ ಮಾಡುವುದು ಹೇಗೆ?
ಸ್ಥಿರ ಠೇವಣಿಗಾಘಿ ಯಾವ ಬ್ಯಾಂಕ್‌ಗಳು ಸೂಕ್ತ ಎಂದು ಹೇಗೆ ನಿರ್ಧಾರ ಮಾಡಬೇಕು ಎನ್ನುವುದನ್ನು ನೀವು ಇಲ್ಲಿ ತಿಳಿಯಿರಿ.
1. ಬ್ಯಾಂಕ್ ಅನ್ನು ಸಂಶೋಧಿಸಿ: ಬ್ಯಾಂಕಿನ ಆರ್ಥಿಕ ಸ್ಥಿರತೆ ಬಗ್ಗೆ ತಿಳಿಯಿರಿ. ಬ್ಯಾಂಕ್‌ನ ಕುರಿತು ಇರುವ ವಿಮರ್ಶೆ ಹಾಗೆ ಸುದ್ದಿಗಳನ್ನ ಪರಿಶೀಲನೆ ಮಾಡಬೇಕು. ಅಲ್ಲದೆ ಇಂತಹ ಸಮಸ್ಯೆಗಳನ್ನ ಆ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಎದುರಿಸಿದೆಯಾ ಎನ್ನುವುದನ್ನು ನೀವು ತಿಳಿದಿರಬೇಕು.
2. ನಿಮ್ಮ ಠೇವಣಿಯನ್ನು ಮಿತಿಗೊಳಿಸಿ: ನೀವು ನಿಮ್ಮ ಠೇವಣಿ ಮೊತ್ತವನ್ನ 5 ಲಕ್ಷಕ್ಕಿತ ಕಡಿಮೆ ಇರಲಿ. ಇದರಿಂದಾಗಿ ನಿಮ್ಮ ಹಳ ಕೂಡ ಸುರಕ್ಷಿತವಾಗಿರುತ್ತದೆ.
3. ವೈವಿಧ್ಯಗೊಳಿಸಿ: ನಿಮ್ಮ ಎಲ್ಲಾ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇರಿಸಬೇಡಿ. ಅದನ್ನಿ ವಿವಿಧ ಬ್ಯಾಂಕುಗಳ ನಡುವೆ ವಿಭಜನೆ ಮಾಡಿ. ಇದರಿಂದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
4. ದರಗಳ ಕುರಿತು ಪರಿಶೀಲಿಸಿ: ಬ್ಯಾಂಕ್‌ನ ಗ್ರಾಹಕ ಸೇವೆಯನ್ನು ಪರಿಶೀಲಿಸಿ. ಆ ಬ್ಯಾಂಕ್‌ನ ಕುರಿತು ಯಾವುದಾದ್ರು ಆರೋಪಗಳಿದ್ದರೆ ಆ ಕುರಿತು ಒಮ್ಮೆ ಪರಿಶೀಲನೆ ಮಾಡಿ.
ನೀವು ಅಲ್ಪಾವಧಿಯ ಸ್ಥಿರ ಠೇವಣಿಗಾಘಿ ನೀವು ಸಣ್ಣ ಬ್ಯಾಂಕ್‌ಗಳನ್ ಆಯ್ಕೆ ಮಾಡಬಹುದು ಎಂದು Bankbazaar.com ನ ಸಿಇಒ ಆದಿಲ್ ಶೆಟ್ಟಿ ಆಬಿಪ್ರಾಯಪಟ್ಟಿದ್ದಾರೆ. ಇನ್ನು ದೀರ್ಘಾವಧಿಯ ಭದ್ರತೆಗಾಗಿ ನೀವು ದೊಡ್ಡ ಬ್ಯಾಂಕ್‌ಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಹೂಡಿಕೆ ಆದಾಯದ ಹೆಚ್ಚಳಕ್ಕಾಗಿ ನೀವು ಹೆಚ್ಚು ಬಡ್ಡಿದರಗಳನ್ನ ನೀಡುವ ಬ್ಯಾಂಕ್‌ಗಳನ್ನ ಆಯ್ಕೆ ಮಾಡಬಹುದು.
ಹೆಚ್ಚು ಬಡ್ಡಿ ದರಗಳನ್ನ ನೀಡುವ ಸಣ್ಣ ಬ್ಯಾಂಕ್‌ಗಳ ಕುರಿತು ನೀವು ಇಲ್ಲಿ ತಿಳಿಯಿರಿ.
ಬ್ಯಾಂಕ್ FD ಬಡ್ಡಿ ದರಗಳು
ಬ್ಯಾಂಕ್ 1-2 ವರ್ಷಗಳು
RBL ಬ್ಯಾಂಕ್ - 8
ಡಾಯ್ಚ ಬ್ಯಾಂಕ್ - 8
ಬಂಧನ್ ಬ್ಯಾಂಕ್ - 8.05
ಡಿಸಿಬಿ ಬ್ಯಾಂಕ್ - 8.05
AU ಸಣ್ಣ ಹಣಕಾಸು ಬ್ಯಾಂಕ್ - 8
ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್ - 8.15
ESAF ಸಣ್ಣ ಹಣಕಾಸು ಬ್ಯಾಂಕ್ - 8.25
ಜನ ಸಣ್ಣ ಹಣಕಾಸು ಬ್ಯಾಂಕ್ - 8.25
ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್ - 8.5
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ - 8.5
ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್ - 8.25
No comments:
Post a Comment